ADVERTISEMENT

ಮೈಸೂರು ಮಹಾನಗರ ಪಾಲಿಕೆಯಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ: ಸರ್ಕಾರದಿಂದ ಆದೇಶ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 15:51 IST
Last Updated 25 ಫೆಬ್ರುವರಿ 2026, 15:51 IST
<div class="paragraphs"><p>ಮೈಸೂರು ಮಹಾನಗರ ಪಾಲಿಕೆ </p></div>

ಮೈಸೂರು ಮಹಾನಗರ ಪಾಲಿಕೆ

   

ಮೈಸೂರು: ಇಲ್ಲಿನ ಮಹಾನಗರ ಪಾಲಿಕೆಯಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಅಧ್ಯಕ್ಷರನ್ನಾಗಿ ದೇವರಾಜ ಮೊಹಲ್ಲಾ ನಿವಾಸಿ, ಮಾಜಿ ಉಪಮೇಯರ್‌ ಪುಷ್ಪವಲ್ಲಿ, ಉಪಾಧ್ಯಕ್ಷರಾಗಿ ಸುಣ್ಣದಕೇರಿಯ ಆರ್.ಗಿರೀಶ್, ಸದಸ್ಯರಾಗಿ ಗಣೇಶ್‌ನಗರದ ಎಂ.ಎನ್. ಮಹದೇವ, ವಿವಿ ಮೊಹಲ್ಲಾದ ಸುಶೀಲಾ ಮರೀಗೌಡ, ವಿದ್ಯಾರಣ್ಯಪುರಂನ ವಿನಯ್‌ ಜೆ. ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಮಹಾನಗರಪಾಲಿಕೆಯ ಉಪ ಆಯುಕ್ತ (ಆಡಳಿತ) ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ADVERTISEMENT

‘ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ನೇರವಾಗಿ ತಲುಪಿಸುವ ಸಲುವಾಗಿ ಸಮಿತಿ ರಚಿಸಲಾಗಿದೆ’ ಎಂದು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.