ADVERTISEMENT

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 16:11 IST
Last Updated 14 ಜುಲೈ 2024, 16:11 IST
ಮೈಸೂರಿನ ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌.ಸಿದ್ದರಾಮಯ್ಯ ಉದ್ಘಾಟಿಸಿದರು. ಮ.ಗು.ಸದಾನಂದಯ್ಯ, ಶಾರದಾ ಶಿವಲಿಂಗ ಸ್ವಾಮಿ, ಎಚ್‌.ಎನ್‌.ನಿರಂಜನ್ ಭಾಗವಹಿಸಿದ್ದರು
ಮೈಸೂರಿನ ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌.ಸಿದ್ದರಾಮಯ್ಯ ಉದ್ಘಾಟಿಸಿದರು. ಮ.ಗು.ಸದಾನಂದಯ್ಯ, ಶಾರದಾ ಶಿವಲಿಂಗ ಸ್ವಾಮಿ, ಎಚ್‌.ಎನ್‌.ನಿರಂಜನ್ ಭಾಗವಹಿಸಿದ್ದರು   

ಮೈಸೂರು: ‘ವಚನಗಳ ಉಳಿವಿಗೆ ಶ್ರಮಿಸಿದ್ದ ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಎನ್‌ವೈಕೆಎಸ್ ಉಪನಿರ್ದೇಶಕ ಎಸ್‌.ಸಿದ್ದರಾಮಯ್ಯ ಹೇಳಿದರು.

ನಗರದ ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಕದಳಿ ವೇದಿಕೆಯಿಂದ ಈಚೆಗೆ ನಡೆದ ಫ.ಗು.ಹಳಕಟ್ಟಿ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವದ ಸಾಹಿತ್ಯ ಮತ್ತು ಧರ್ಮದಲ್ಲಿ ಕಾಣದ ವೈಜ್ಞಾನಿಕ, ಧಾರ್ಮಿಕ, ಸಾಮಾಜಿಕ ಮೌಲ್ಯಗಳು ವಚನ ಸಾಹಿತ್ಯದಲ್ಲಿವೆ. ವಚನಗಳನ್ನು ಮುಂದಿನ ಪೀಳಿಗೆ ಉಳಿಸುವ ದೃಷ್ಟಿಯಿಂದ ಅಧ್ಯಯನ ಅಗತ್ಯ’ ಎಂದರು.

ADVERTISEMENT

‘ವಚನ ಪಿತಾಮಹ ಹಳಕಟ್ಟಿ ಅವರು ಬಹುಮುಖ ಪ್ರತಿಭೆ ಉಳ್ಳವರು. ಅವರ ಬದುಕಿನ ಕೊನೆವರೆಗೂ ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿ ಪ್ರಸಾರ ಮಾಡಿದ್ದಾರೆ. ವಚನ ಸಾಹಿತ್ಯದ ಬೆಳಕು ಜಗತ್ತಿಗೆ ಪಸರಿಸಿದ್ದಾರೆ. ಅವರಿಂದ ವಿಶ್ವ ಮಾನ್ಯತೆ ಪಡೆದ ವಚನಗಳು ದೊರೆತ್ತಿವೆ’ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ‘ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ವಚನಗಳನ್ನು ಓದಿ, ಬರೆದು ಬಹುಮಾನ ಪಡೆದಿರುವುದು ವಚನಗಳ ಸಂರಕ್ಷಣೆಯ ಮತ್ತೊಂದು ಭಾಗ’ ಎಂದರು.

ದತ್ತಿ ದಾನಿಗಳಾದ ಮಂಗಳಾ ಮುದ್ದುಮಾದಪ್ಪ, ಡಾ.ಬಿ.ನಿರ್ಮಲಾ ಅವರು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳು ಬಗ್ಗೆ ಮಾಹಿತಿ ನೀಡಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಜೆಎಸ್ಎಸ್ ಸಂಸ್ಥೆಯ ಪ್ರಾಂಶುಪಾಲ ಎಚ್‌.ಎನ್‌.ನಿರಂಜನ್ ವಿತರಿಸಿದರು. ಅರಿವಿನ ಮನೆ ಮಹಿಳಾ ಬಳಗದಿಂದ ವಚನ ಗಾಯನ ನಡೆಯಿತು.

ಕದಳಿ ವೇದಿಕೆಯ ಅಧ್ಯಕ್ಷರಾದ ಶಾರದಾ ಶಿವಲಿಂಗ ಸ್ವಾಮಿ, ಟಿ.ಎಸ್‌.ಕುಮಾರಸ್ವಾಮಿ, ಮಮತಾ, ಎಚ್‌.ಮುದ್ದು ಮಲ್ಲೇಶ್, ಮಂಜುಳಾ, ಲತಾ, ಸದಾಶಿವ, ಲೋಕೇಶಪ್ಪ, ನಂದೀಶ್, ಚಿನ್ನಸ್ವಾಮಿ, ಮೀನಾ, ವಿಜಯ, ಮಲ್ಲಿಕಾ, ಲಲಿತಾ, ಪಾಟೀಲ್, ಚನ್ನಬಸಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.