ರೈಲು
– ಪ್ರಜಾವಾಣಿ ಚಿತ್ರ
ಮೈಸೂರು: ‘ರೈಲುಗಳ ಸಂಚಾರದ ಸಮಯ ಪಾಲನೆಯನ್ನು ಸುಧಾರಿಸುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆಯು ಹಾಸನ – ಸೋಲಾಪುರ ಎಕ್ಸ್‌ಪ್ರೆಸ್ ರೈಲಿನ (ರೈಲು ಸಂಖ್ಯೆ 11312) ವೇಳಾಪಟ್ಟಿಯನ್ನು ಪರಿಷ್ಕರಿಸಲು ನಿರ್ಧರಿಸಿದೆ. ಈ ಹೊಸ ವೇಳಾಪಟ್ಟಿಯು ಏ.1ರಿಂದ ಜಾರಿಗೆ ಬರಲಿದೆ’ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.
‘ಪರಿಷ್ಕೃತ ವೇಳಾಪಟ್ಟಿಯಂತೆ, ಈ ರೈಲು ಹಾಸನ ನಿಲ್ದಾಣದಿಂದ ಸಂಜೆ 4.45ರ ಬದಲಿಗೆ 4.15ಕ್ಕೆ ನಿರ್ಗಮಿಸಲಿದೆ. ಮಾರ್ಗಮಧ್ಯದ ನಿಲ್ದಾಣಗಳಾದ ಶ್ರವಣಬೆಳಗೊಳ (4.53/4.54), ಬಿ.ಜಿ. ನಗರ (5.23/5.24), ಎಡೆಯೂರು (5.37/5.38), ಕುಣಿಗಲ್ (5.53/5.54) ಮತ್ತು ನೆಲಮಂಗಲ (6.25/6.26) ನಿಲ್ದಾಣಗಳಿಗೂ ಪರಿಷ್ಕೃತ ಸಮಯದ ಅನ್ವಯ ಆಗಮಿಸಿ, ನಿರ್ಗಮಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಯಶವಂತಪುರ ಮತ್ತು ಸೋಲಾಪುರ ನಿಲ್ದಾಣಗಳ ನಡುವಿನ ರೈಲು ಸಂಚಾರದ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಈ ಬದಲಾವಣೆ ಗಮನಿಸಬೇಕು’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.