ADVERTISEMENT

ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 8:44 IST
Last Updated 12 ಜನವರಿ 2026, 8:44 IST
<div class="paragraphs"><p>ಎಚ್.ಸಿ. ಮಹದೇವಪ್ಪ</p></div>

ಎಚ್.ಸಿ. ಮಹದೇವಪ್ಪ

   

ಮೈಸೂರು: 'ಬಿಜೆಪಿ ಆಡಳಿತದಲ್ಲಿ ಬಳ್ಳಾರಿ ಹೇಗೆ ರಿಪಬ್ಲಿಕ್ ಆಗಿತ್ತು. ಸಂಪತ್ತು ಯಾರ ಕೈಯಲ್ಲಿ ಇತ್ತು ಎಂಬುದು ಗೊತ್ತಿದೆ. ಆರೋಪಿಗಳೇ ಪಾದಯಾತ್ರೆ- ಸಮಾವೇಶ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ' ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.‌ ಮಹದೇವಪ್ಪ ಟೀಕಿಸಿದರು.‌

ಬಳ್ಳಾರಿ ಘಟನೆ ಖಂಡಿಸಿ ಬಿಜೆಪಿಯು ಪಾದಯಾತ್ರೆಗೆ ಸಿದ್ಧತೆ ನಡೆಸಿರುವ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು 'ರಾಜಕೀಯ ಉದ್ದೇಶಕ್ಕೆ ನಡೆಯುವ ಯಾತ್ರೆಯಿಂದ ಪ್ರಯೋಜನವಿಲ್ಲ' ಎಂದರು.

ADVERTISEMENT

ಖಾಸಗಿ‌ ಕ್ಷೇತ್ರದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಜಾರಿಗೆ ಕಿರಣ್ ಮಜುಂದಾರ್ ಸೇರಿದಂತೆ ಹಲವರು ವಿರೋಧಿಸುತ್ತಿರುವ ಪ್ರತಿಕ್ರಿಯಿಸಿ, 'ರಾಜ್ಯದಲ್ಲಿನ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು. ಇಲ್ಲವಾದರೆ ನಾವು ಏನು ಮಾಡಬೇಕೋ‌ ಮಾಡುತ್ತೇವೆ' ಎಂದರು.

'ಉದ್ಯೋಗ ಖಾತ್ರಿ ಯೋಜನೆಗೆ ತಿದ್ದುಪಡಿ ವಿಚಾರದಲ್ಲಿ ಯಾರು ಬಂದರೂ ಚರ್ಚೆಗೆ ಸಿದ್ಧರಿದ್ದೇವೆ. ಇದೊಂದು ಸಂವಿಧಾನ ವಿರೋಧಿ ನಡೆ. ಅದಕ್ಕಾಗಿಯೇ ಕಾಂಗ್ರೆಸ್ ನರೇಗಾ ಬಚಾವೊ ಆಂದೋಲನ ಹಮ್ಮಿಕೊಳ್ಳುತ್ತಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.