
ಎಚ್.ಡಿ.ಕೋಟೆ: ಜೇನುಸಾಕಣೆಯಲ್ಲಿ ವೈಜ್ಞಾನಿಕ , ತಂತ್ರಜ್ಞಾನ ಸಕ್ರಿಯಗೊಳಿಸಿದ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಜೇನುಕೃಷಿ ವಿಭಾಗದ ವಿಜ್ಞಾನಿ ಕೆ.ಟಿ. ವಿಜಯಕುಮಾರ್ ತಿಳಿಸಿದರು.
ತಾಲ್ಲೂಕಿನ ಸೊಳ್ಳೇಪುರ ಸಿ–ಹಾಡಿಯಲ್ಲಿ ಗೀತಂ ವಿಶ್ವವಿದ್ಯಾಲಯ ಮತ್ತು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಭಾಗಿತ್ವದಲ್ಲಿ ಗುರುವಾರ ನಡೆದ ಕರ್ನಾಟಕದ ಜೇನು ಕುರುಬ ಬುಡಕಟ್ಟು ಸಮುದಾಯಕ್ಕೆ ಜೇನುಸಾಕಣೆಯಲ್ಲಿ ಸಮುದಾಯ ಸಂಪರ್ಕ ಮತ್ತು ಮೌಲ್ಯವರ್ಧನೆ ತರಬೇತಿಯಲ್ಲಿ ಅವರು ಮಾತನಾಡಿದರು.
ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸಬೇಕು ಎಂದರು.
ಮೌಲ್ಯವರ್ಧನೆಯನ್ನು ಸುಗಮಗೊಳಿಸಲು ಮತ್ತು ಜೇನು ಉತ್ಪನ್ನಗಳ ಗುಣಮಟ್ಟ, ಮಾರುಕಟ್ಟೆ ವಿಧಾನಗಳನ್ನು ಸುಧಾರಿಸಲು ಅಗತ್ಯ ಸಲಕರಣೆ ಅಳವಡಿಸಿ, ಜೇನು ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ವಿತರಣೆ: ವೈಜ್ಞಾನಿಕ ಜೇನು ಕೃಷಿ ಉತ್ತೇಜಿಸಲು ಫಲಾನುಭವಿಗಳಿಗೆ 500 ಜೇನು ಪೆಟ್ಟಿಗೆಗಳು ಮತ್ತು ಸಂಬಂಧಿತ ಜೇನು ಕೃಷಿ ಉಪಕರಣಗಳನ್ನು ವಿತರಿಸಲಾಯಿತು.
ಸಾರ್ವಜನಿಕ ಅಭಿವೃದ್ಧಿ ಅಧಿಕಾರಿ ಸುಲೈಮಾನ್ ರಾಜ್, ಕಾಳಿಂಗೇಗೌಡ, ಪಂಚಾಯಿತಿ ಸದಸ್ಯ ಭಾಸ್ಕರ, ಸಹಕಾರ ಸಂಘದ ಉಪಾಧ್ಯಕ್ಷೆ ಗೀತಾ, ಗೀತಂ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಪ್ರೊ. ಐ. ಜೀನಾ ಜಾಕೋಬ್, ಡಾ. ಟಿ. ಪ್ರಸನ್ನ ವೆಂಕಟೇಶನ್, ಡಾ. ಎ. ವಿಶ್ವ ಭಾರತಿ, ಡಾ. ಸುಜಿತ್ ಬಸಕ್, ಡಾ. ಡಿ. ನಿರ್ಮಲಾದೇವಿ, ಪ್ರೊ. ವಂಶಿಧರ್ ಯೆಂಡಪಲ್ಲಿ, ಪ್ರೊ. ಕೆ.ಜಿ.ಮೋಹನ್ ಇದ್ಜರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.