
ಪ್ರಜಾವಾಣಿ ವಾರ್ತೆ
ಮೈಸೂರು: ಕುವೆಂಪು ನಗರದ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿ ಬುಧವಾರ ಸಂಜೆ ಮುಳ್ಳು ಹಂದಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿತು.
ವಿಜಯ ಬ್ಯಾಂಕ್ ಸರ್ಕಲ್ ಮತ್ತು ಶಾರದಾದೇವಿ ನಗರದ ವೃತ್ತದ ನಡುವಿನ ರಸ್ತೆಯಲ್ಲಿ ಕಾಣಿಸಿಕೊಂಡ ಮುಳ್ಳು ಹಂದಿಯು ರಸ್ತೆ ದಾಟುವಾಗ ವಾಹಕ್ಕೆ ಡಿಕ್ಕಿಯಾಗಿ ಗಾಯಗೊಂಡಿತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಮುಳ್ಳುಹಂದಿಯನ್ನು ಹಿಡಿದು ರಕ್ಷಿಸಿ ಕೂರ್ಗಳ್ಳಿಯಲ್ಲಿರುವ ಚಾಮರಾಜೇಂದ್ರದ ಮೃಗಾಲಯದ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದರು.