ADVERTISEMENT

‘ರಾಷ್ಟ್ರೀಯತೆ–ಹಿಂದೂ ಧರ್ಮ ಒಂದೇ’

ವಿವೇಕಾನಂದರ ಸಂದೇಶದಲ್ಲಿರುವ ಹಿಂದುತ್ವ ಆಯಾಮ ಅರಿಯಿರಿ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:12 IST
Last Updated 25 ನವೆಂಬರ್ 2025, 3:12 IST
<div class="paragraphs"><p>ಮೈಸೂರಿನ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸಮಾರಂಭದಲ್ಲಿ ಸೋಮವಾರ ನಡೆದ ‘ಸಮರ್ಪಣಾ ಸಮಾವೇಶ’ದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. ವಕೀಲ ಶ್ರೀನಿವಾಸಮೂರ್ತಿ,   </p></div>

ಮೈಸೂರಿನ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸಮಾರಂಭದಲ್ಲಿ ಸೋಮವಾರ ನಡೆದ ‘ಸಮರ್ಪಣಾ ಸಮಾವೇಶ’ದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು. ವಕೀಲ ಶ್ರೀನಿವಾಸಮೂರ್ತಿ,

   

ಮೈಸೂರು: ‘ರಾಷ್ಟ್ರೀಯತೆ ಮತ್ತು ಹಿಂದೂ ಧರ್ಮ ಒಂದೇ ಎಂಬ ಆಯಾಮವು ಸ್ವಾಮಿ ವಿವೇಕಾನಂದರ ಸಂದೇಶದಲ್ಲಿದ್ದು, ಇದನ್ನು ಎಲ್ಲರೂ ಅರಿಯಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ರಾಮಕೃಷ್ಣ ಆಶ್ರಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ನಡೆದ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಹಿಂದುತ್ವವು ಭೂಮಿಯನ್ನು ತಾಯಿ ಎನ್ನುತ್ತದೆ, ಪೂಜಿಸುತ್ತದೆ. ರಾಷ್ಟ್ರೀಯತೆ ಕಲ್ಪನೆಯೂ ಇದೇ ಆಗಿದೆ’ ಎಂದರು.

ADVERTISEMENT

‘ಇಂದು ಸಮಾಜದಲ್ಲಿ ಬಹಳಷ್ಟು ಗೊಂದಲ ಸೃಷ್ಟಿಯಾಗಿದೆ, ಮಾನವನ ಮನಸ್ಸು ಕಲುಷಿತವಾಗಿದೆ. ಎಲ್ಲರನ್ನೂ ಒಗ್ಗೂಡಿಸಬೇಕಿದ್ದ ಧರ್ಮ ಬೇರ್ಪಡೆ ಮಾಡುತ್ತಿದೆ. ನಿಜವಾದ ಹಿಂದೂ ಧರ್ಮ ಅರಿತವರು ರಾಷ್ಟ್ರೀಯತೆಯನ್ನೂ ಪ್ರತಿಪಾದಿಸುತ್ತಾರೆ. ದೇಶವನ್ನೂ ಕಟ್ಟುತ್ತಾರೆ’ ಎಂದರು.

‘ವಿವೇಕಾನಂದರು ಯುಗದಲ್ಲಿ ಒಮ್ಮೆ ಕಾಣಬಹುದಾದ ವ್ಯಕ್ತಿತ್ವ. ಸುಖವನ್ನು ಬದಿಗಿರಿಸಿ ಜ್ಞಾನದ ಮಾರ್ಗವನ್ನು ಅನುಸರಿಸಿದವರು ದೇವರ ಮಾರ್ಗ ಕಾಣುತ್ತಾರೆ, ಇಂಥ ಸನ್ಮಾರ್ಗಕ್ಕೆ ಧರ್ಮವೇ ಮೂಲ ಎಂದಿದ್ದಾರೆ. ಮಹಾತ್ಮನಂತೆ ನಟಿಸುವುದರಿಂದ ಪ್ರಯೋಜನವಿಲ್ಲ. ನಮ್ಮದೇ ವ್ಯಕ್ತಿತ್ವ ಹೊಂದುವ ಪ್ರಯತ್ನದಲ್ಲೇ ಯಶಸ್ಸಿದೆ’ ಎಂದರು.

ಮೋದಿ ಜೊತೆ ನಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ 2047ರ ವಿಕಸಿತ ಭಾರತ ಕನಸನ್ನು ನನಸು ಮಾಡಲು ನಾವೆಲ್ಲರೂ ಕೈಜೋಡಿಸಬೇಕು. ಮೋದಿ ಅವರಲ್ಲಿ ಸ್ವಾಮಿ ವಿವೇಕಾನಂದ, ಪರಮಹಂಸರ ಆದರ್ಶವಿದೆ. 2047ಕ್ಕೆ ಪ್ರಧಾನಿ ಮೋದಿ ಇರುತ್ತಾರಾ ಎಂದು ಪ್ರಶ್ನಿಸುವವರಿಗೆ, ದೇಶ ಇರುತ್ತದೆ ಮತ್ತು ಅದನ್ನು ಸದೃಢವಾಗಿರಸಬೇಕಿದೆ ಎನ್ನುವುದೇ ಉತ್ತರ’ ಎಂದರು. 

ರಾಮಕೃಷ್ಣ ಮಠದ ಪರಮಾಧ್ಯಕ್ಷ ಸ್ವಾಮಿ ಗೌತಮಾನಂದ, ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ, ರಾಮಕೃಷ್ಣ ಮಿಷನ್‌ ಕಾರ್ಯದರ್ಶಿ ಸ್ವಾಮಿ ಶಾಂತಾತ್ಮಾನಂದ, ವಕೀಲ ಶ್ರೀನಿವಾಸಮೂರ್ತಿ ಹಾಜರಿದ್ದರು.

‘ಪ್ರಪಂಚಕ್ಕೆ ವಿವೇಕಾನಂದರ ಮಾರ್ಗ ಅಗತ್ಯ’

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ ‘ಹಿಂದೆಂದಿಗಿಂತಲೂ ಪ್ರಪಂಚಕ್ಕೆ ಇಂದು ವಿವೇಕಾನಂದರ ಮಾರ್ಗ ಹೆಚ್ಚು ಅಗತ್ಯ. ಯುದ್ಧ ಅನೇಕ ಸಮಸ್ಯೆಗಳಿಂದ ಕೂಡಿರುವ ಸಮಾಜಕ್ಕೆ ಸ್ವಾಮೀಜಿಯ ಸಂದೇಶದಲ್ಲಿ ಉತ್ತರವಿದೆ’ ಎಂದರು. ‘ಸ್ವಾಮಿ ಸಿದ್ದೇಶ್ವರಾನಂದರಿಂದ ಸ್ಥಾಪನೆಯಾದ ಮೈಸೂರಿನ ಆಶ್ರಮವು ಯುವಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತಿದೆ. ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ್ದು ಸಾವಿರಾರು ಮಕ್ಕಳ ಬಾಳಲ್ಲಿ ವಿದ್ಯಾಬೆಳಕು ಹರಿಸಿದೆ. ದೇಶಕ್ಕೆ ಅನೇಕ ಸ್ವಾಮೀಜಿಗಳನ್ನು ನೀಡಿದೆ’ ಎಂದು ಶ್ಲಾಘಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.