ADVERTISEMENT

ಹುಲ್ಲಹಳ್ಳಿ | ಸೈದಾನಿ ಬೀ ಮಾ ಉರುಸ್‌ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:11 IST
Last Updated 13 ಫೆಬ್ರುವರಿ 2026, 6:11 IST
ನಂಜನಗೂಡು ತಾಲ್ಲೂಕಿನ ಬೆಳಲೆಯಲ್ಲಿ ನಡೆಯುವ ಹಿಂದೂ, ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಹಜರತ್ ಸೈದಾನಿ ಬೀ ಮಾ ದರ್ಗಾದಲ್ಲಿ ಸಿದ್ಧತೆ ಪರಿಶೀಲಿಸಿದ ಪೊಲೀಸ್‌ ಅಧಿಕಾರಿಯೊಂದಿಗೆ ಮುಖಂಡರು
ನಂಜನಗೂಡು ತಾಲ್ಲೂಕಿನ ಬೆಳಲೆಯಲ್ಲಿ ನಡೆಯುವ ಹಿಂದೂ, ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಹಜರತ್ ಸೈದಾನಿ ಬೀ ಮಾ ದರ್ಗಾದಲ್ಲಿ ಸಿದ್ಧತೆ ಪರಿಶೀಲಿಸಿದ ಪೊಲೀಸ್‌ ಅಧಿಕಾರಿಯೊಂದಿಗೆ ಮುಖಂಡರು   

ಹುಲ್ಲಹಳ್ಳಿ (ನಂಜನಗೂಡು): ತಾಲ್ಲೂಕಿನ ಬೆಳಲೆಯಲ್ಲಿ ಫೆ.14ರಂದು ನಡೆಯುವ ಹಿಂದೂ, ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಹಜರತ್ ಸೈದಾನಿ ಬೀ ಮಾ ಅವರ ಗಂಧದ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ.

ಅಂದು ಹುಲ್ಲಹಳ್ಳಿಯ ಜಾಮೀಯ ಮಸೀದಿಯಿಂದ ಹೂವಿನಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಗಂಧದ ಮೆರವಣಿಗೆ ನಡೆಯಲಿದ್ದು, ನಂತರ ಹಜ್ರತ್ ಸೈದಾನಿ ಬೀ ಮಾ ದರ್ಗಾಕ್ಕೆ ಗಂಧ ಅರ್ಪಿಸಲಾಗುವುದು. ರಾತ್ರಿ 9ಕ್ಕೆ ವಿಶೇಷವಾಗಿ ಅಜ್ಮೀರೀ ಪ್ರಸಿದ್ಧ ಕವಾಲಿ ಸಿಮ್ರಾನ್ ಸೂಫಿ ರವರ ನೇತೃತ್ವದಲ್ಲಿ ನಡೆಯಲಿದೆ .

ಈ ಸಂದರ್ಭದಲ್ಲಿ ದರ್ಗಾ ಶರೀಫ್ ಗುರುಗಳಾದ ಅಹ್ಮದ್ ಮೌಲ್ವಿ, ಸಮಿತಿ ಅಧ್ಯಕ್ಷ ಹಾಜಿ ನೂರ್ ಅಹಮದ್, ನಾಸಿರ್ ಅಹಮದ್, ಶಹಜಹಾನ್, ವಾಸಿಮ್ ಅಹಮದ್, ಜಬೀವುಲ್ಲಾ, ಬಾಬು, ಶಿವಕುಮಾರ್ ಉಪಸ್ಥಿತರಿರುವರು ಎಂದು ಎಂದು ದರ್ಗಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.