ADVERTISEMENT

ನಂಜನಗೂಡು: ಗರ್ಭಿಣಿ ಹೆಂಡತಿ ಕೊಂದ ಗಂಡ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 15:42 IST
Last Updated 14 ಸೆಪ್ಟೆಂಬರ್ 2023, 15:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನಂಜನಗೂಡು: ನಗರದ ಚಾಮಾಲಾಪುರದ ಹುಂಡಿ ಬಡಾವಣೆಯಲ್ಲಿ ಗುರುವಾರ ಗರ್ಭಿಣಿ ಹೆಂಡತಿಯ ಮೇಲೆ ಆಕೆಯ ಗಂಡ ಮಂಜುನಾಥ್‌ ಚಾಕುವಿನಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾನೆ.

ಚಾಮಾಲಾಪುರದ ಹುಂಡಿ ಬಡಾವಣೆಯ ನಿವಾಸಿ ಶೋಭಾ (21) ಮೃತಪಟ್ಟ ಮಹಿಳೆ.

ಗಂಡನೊಂದಿಗೆ ಮನಸ್ತಾಪ ಉಂಟಾಗಿ ತವರು ಮನೆಗೆ ಶೋಭಾ ಬಂದಿದ್ದಳು. ಅದೇ ಬಡಾವಣೆಯ ಆರೋಪಿ ಕಟ್ಟಡ ಕಾರ್ಮಿಕ ಮಂಜುನಾಥ್‌, ತನ್ನ ಹೆಂಡತಿಯನ್ನು ತನ್ನ ಜೊತೆಗೆ ಕಳುಹಿಸುವಂತೆ ಜಗಳ ತೆಗೆದಿದ್ದಾನೆ. ಆದರೆ ಶೋಭಾ ಮನೆಯವರು ಕಳುಹಿಸಲು ಒಪ್ಪದಿದ್ದಾಗ ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದಾನೆ. 7 ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ತೀವ್ರ ರಕ್ತಸ್ರಾವವಾಗೊಂಡಿದ್ದು, ಕೆ.ಆರ್‌.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಂಪತಿಗೆ 2 ವರ್ಷದ ಗಂಡು ಮಗುವಿದೆ

ADVERTISEMENT

ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಮಂಜುನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.