ADVERTISEMENT

ಶಾಸಕರು, ಸಂಸದರು ಹೇಳುವ ಮಾತನ್ನು ನಾನು ಕೇಳ್ಬೇಕು: ಎಸ್.ಟಿ. ಸೋಮಶೇಖರ್ 

​ಪ್ರಜಾವಾಣಿ ವಾರ್ತೆ
Published 29 ಮೇ 2021, 5:45 IST
Last Updated 29 ಮೇ 2021, 5:45 IST
ಸಚಿವ ಎಸ್.ಟಿ. ಸೋಮಶೇಖರ್
ಸಚಿವ ಎಸ್.ಟಿ. ಸೋಮಶೇಖರ್   

ಮೈಸೂರು: ಶಾಸಕರು, ಸಂಸದರು ಹೇಳುವ ಮಾತನ್ನು ನಾನೂ ಕೇಳಬೇಕು, ಬೇರೆಯವರು ಕೇಳಬೇಕು ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಪ್ರತಾಪ್‌ಸಿಂಹ ಪರ ನಿಂತ ಸಚಿವ ಎಸ್.ಟಿ.ಸೋಮಶೇಖರ್, ಕೋವಿಡ್ ನಿಯಂತ್ರಣಕ್ಕೆ ಜನಪ್ರತಿನಿಧಿಗಳಿಗೆ ಹೇಳುವ ಅಧಿಕಾರ ಇದೆ. ಪಾಲಿಸುವ ಬದ್ಧತೆ ನನಗೂ ಇದೆ, ಅಧಿಕಾರಿಗಳೂ ಪಾಲಿಸಬೇಕು. ಇದರಲ್ಲಿ ವೈಯುಕ್ತಿಕ ಏನೂ ಇಲ್ಲ ಎಂದ ಅವರು, ರೋಹಿಣಿ ಸಿಂಧೂರಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಟಾಸ್ಕ್‌‌ಫೋರ್ಸ್ ರಚನೆಗೆ ಎಚ್. ವಿಶ್ವನಾಥ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಟಾಸ್ಕ್‌ಫೋರ್ಸ್‌ಗೆ ಅಧಿಕಾರ ಇಲ್ಲ ಎನ್ನುವುದಾದರೆ ಇವರಿಗೆ ಹೇಳುವ ಅಧಿಕಾರ ಏನಿದೆ. ಇವರಿಗೆ ಅಧಿಕಾರ ಕೊಟ್ಟವರು ಯಾರು‌? ಅಧಿಕಾರಕ್ಕಾಗಿ ಟಾಸ್ಕ್‌ಫೋರ್ಸ್ ರಚಿಸಿಲ್ಲ, ಸೇವೆಗಾಗಿ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.