ಎಚ್.ಡಿ.ಕೋಟೆ: ಐಐಟಿ, ಜೆಇಇ ಅಡ್ವಾನ್ಸ್ ನವದೆಹಲಿ ತರಬೇತಿಗೆ ಆಯ್ಕೆಯಾದ ತಾಲ್ಲೂಕಿನ ಸೊಳ್ಳೆಪುರದ ಏಕಲವ್ಯ ಮಾದರಿ ವಸತಿ ಶಾಲೆ ಮತ್ತು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಪುನೀತ್ ಸಿದ್ದನಾಯಕ ಹಾಡ್ಯ, ಪ್ರೀತಂ ಪಿ.ಎಸ್. ಸ್ವಾಮಿ ನಾಯಕ ಪೂನಹಳ್ಳಿ, ಕೌಶಲ್ಯ ನಿಂಗರಾಜು ಕುನ್ನಪಟ್ಟಣ, ಕೌಶಿಕ್ ಸ್ವಾಮಿ ನಾಯಕ ಪುನಾಹಳ್ಳಿ ಅವರನ್ನು ಈಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವಿಸಿದರು.
ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸಂಘದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ನವದೆಹಲಿಯಲ್ಲಿ ಆಫ್‌ಲೈನ್ ತರಬೇತಿ ಪಡೆದ ಇವರು ಭಾನುವಾರ ಪರೀಕ್ಷೆ ಬರೆದಿದ್ದಾರೆ ಎಂದು ಪ್ರಾಂಶುಪಾಲ ರಾಕೇಶ್ ಚಂದ್ರವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.