ADVERTISEMENT

ಯುವ ಸಮೂಹದಿಂದ ವಿಕಸಿತ ಭಾರತ: ಪ್ರಹ್ಲಾದ್‌ ರಾಮರಾವ್‌

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:32 IST
Last Updated 4 ಜುಲೈ 2025, 15:32 IST
ಮೈಸೂರಿನ ವ್ಯಾಸರಾಜಮಠ (ಸೋಸಲೆ) ವಿದ್ಯಾಶ್ರೀಶತೀರ್ಥ ಸ್ವಾಮೀಜಿಯ 9ನೇ ಪೀಠಾರೋಹಣ ವಾರ್ಷಿಕೋತ್ಸವ ಮತ್ತು ವಿದ್ಯಾಪೀಠದ ವಾರ್ಷಿಕೋತ್ಸವವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು    ಪ್ರಜಾವಾಣಿ ಚಿತ್ರ
ಮೈಸೂರಿನ ವ್ಯಾಸರಾಜಮಠ (ಸೋಸಲೆ) ವಿದ್ಯಾಶ್ರೀಶತೀರ್ಥ ಸ್ವಾಮೀಜಿಯ 9ನೇ ಪೀಠಾರೋಹಣ ವಾರ್ಷಿಕೋತ್ಸವ ಮತ್ತು ವಿದ್ಯಾಪೀಠದ ವಾರ್ಷಿಕೋತ್ಸವವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು    ಪ್ರಜಾವಾಣಿ ಚಿತ್ರ   

ಮೈಸೂರು: ‘ಯುವ ಸಮೂಹದ ಪ್ರಯತ್ನದಿಂದ ವಿಕಸಿತ ಭಾರತ ರೂಪುಗೊಳ್ಳಲು ಸಾಧ್ಯ’ ಎಂದು ಡಿಆರ್‌ಡಿಒ ಮಾಜಿ ವಿಜ್ಞಾನಿ ಪ್ರಹ್ಲಾದ್‌ ರಾಮರಾವ್‌ ತಿಳಿಸಿದರು.

ವ್ಯಾಸರಾಜಮಠ (ಸೋಸಲೆ) ವಿದ್ಯಾಶ್ರೀಶತೀರ್ಥ ಸ್ವಾಮೀಜಿಯ 9ನೇ ಪೀಠಾರೋಹಣ ವಾರ್ಷಿಕೋತ್ಸವ ಮತ್ತು ವಿದ್ಯಾಪೀಠದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

‘ಗುರುಕುಲದ ಶಿಕ್ಷಣದಲ್ಲಿ ವಿಜ್ಞಾನ, ತಂತ್ರಜ್ಞಾನದ ಕಲಿಕೆಯಿತ್ತು. ಆಧುನಿಕ ಶಿಕ್ಷಣವೂ ಅದನ್ನೇ ಮುಂದುವರಿಸಿದೆ. ಪೂರ್ವ ಕಾಲದಲ್ಲಿನ ಆಚರಣೆಗಳಿಗೂ ವೈಜ್ಞಾನಿಕತೆಯ ಸ್ಪರ್ಶ ಇತ್ತು. ಇಂದಿನ ವಿದ್ಯಾರ್ಥಿಗಳು ಎಲ್ಲಾ ವಿಚಾರಗಳ ಅಧ್ಯಯನ ಮಾಡುವುದರೊಂದಿಗೆ ಆಧ್ಯಾತ್ಮಿಕವಾಗಿಯೂ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ವ್ಯಾಸರಾಜಮಠ ನೀಡುತ್ತಿರುವ ಶಿಕ್ಷಣವು ಇತರರಿಗೆ ಮಾದರಿಯಾಗಿತ್ತು. ಇಂತಹ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು. ಭವಿಷ್ಯದ ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನದೊಂದಿಗೆ ದೇಶದ ರಕ್ಷಣೆಗಾಗಿ ಯುದ್ಧಾಭ್ಯಾಸವು ಅಗತ್ಯವಾಗಿದೆ’ ಎಂದು ಹೇಳಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಕೆ.ಜಯರಾಜ್, ಸಿ.ಎಸ್‌.ಸುರಂಜನ, ಎಚ್‌.ಎಸ್‌.ಹರಿಪ್ರಸಾದ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.