ADVERTISEMENT

ಮೈಸೂರು| ಸಂವಿಧಾನ ಆಶಯ ಪಾಲಿಸಿದರೆ ವಿಕಸಿತ ಭಾರತ: ಸಂಸದ ಯದುವೀರ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 13:13 IST
Last Updated 26 ಜನವರಿ 2026, 13:13 IST
   

ಮೈಸೂರು: ‘ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಂವಿಧಾನದ ಆಶಯಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿಕಸಿತ ಭಾರತ ನಿರ್ಮಾಣದ ಕನಸು ನನಸಾಗಲಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಇಲ್ಲಿನ ಬಿಜೆಪಿ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಭಾರತೀಯ ಸಂವಿಧಾನವು ಕಾನೂನುಗಳ ಸಂಗ್ರಹವಷ್ಟೆ ಅಲ್ಲ. ಅದು ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಅಳವಡಿಸುವ ಶಕ್ತಿಯುತ ಗ್ರಂಥ’ ಎಂದರು.

ADVERTISEMENT

‘ಪ್ರತಿಯೊಬ್ಬ ನಾಗರಿಕನೂ ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುವ ಸಂಕಲ್ಪ ಮಾಡಬೇಕು’ ಎಂದು ತಿಳಿಸಿದರು.

ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ವಿಭಾಗೀಯ ಪ್ರಭಾರಿ ಶ್ರೀ ಮೈ.ವಿ. ರವಿಶಂಕರ್, ರಾಜ್ಯ ಪ್ರಕೋಷ್ಠಗಳ ಸಂಚಾಲಕರಾದ ಎನ್.ವಿ. ಪಣೀಶ್, ಎಂ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಸಿ.ಕೆ. ರುದ್ರಮೂರ್ತಿ, ಬಿ.ಎಂ. ರಘು, ಪರೀಕ್ಷಿತ್ ರಾಜೇ ಅರಸ್, ಎಂ.ಎ.ಮೋಹನ್‌ ಹಿನಕಲ್, ಶ್ರೀನಿವಾಸ್, ದಯಾನಂದ ಪಟೇಲ್, ಮೋನಿಕಾ, ಎಂ ಜಿ.ಪರಶುರಾಮಪ್ಪ, ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ನರಸಿಂಹರಾಜ ಅಧ್ಯಕ್ಷ ಮಂಜುನಾಥ್ ಮರಿಸ್ವಾಮಿ ನಾಯಕ್, ದಾರಿಪುರ ಡಿ.ಚಂದ್ರಶೇಖರ್, ಸಂತೋಷ್ ಕುಮಾರ್ ಬಿ.ಎಂ. ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.