ADVERTISEMENT

ಬೋಧಕ ಸಿಬ್ಬಂದಿ ವಿರುದ್ಧ ತನಿಖೆಗೆ ಆದೇಶ

ಕೆಎಸ್‌ಒಯು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಮೇ 2019, 1:16 IST
Last Updated 4 ಮೇ 2019, 1:16 IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಾಕಾರಿ ಹೇಳಿಕೆ ನೀಡುತ್ತಿದ್ದ ವಿ.ವಿ.ಯ ಬೋಧಕ ಸಿಬ್ಬಂದಿಯೊಬ್ಬರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ತಿ.ನರಸೀಪುರದ ರಂಗನಾಥ ಎಂಬವರು ಶಿವಲಿಂಗಯ್ಯ ಅವರ ವಿರುದ್ಧ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆಯೋಗದಿಂದ ಈ ಕುರಿತು ಶಿವಲಿಂಗಯ್ಯ ಅವರಿಂದ ಸ್ಪಷ್ಟನೆ ಕೇಳಿತ್ತು. ಇದಾದ ಬಳಿಕ ರಂಗನಾಥ ಅವರಿಗೆ ಶಿವಲಿಂಗಯ್ಯ ಅವರು ನೋಟಿಸ್ ಕಳುಹಿಸಿದ್ದು, ವಿಳಾಸ ಪತ್ತೆಯಾಗಿಲ್ಲ ಎಂಬ ಸಂದೇಶ ಸಿಕ್ಕಿತ್ತು.

ಈ ನಡುವೆ ವಿ.ವಿ.ಯ ಬೋಧಕ ಸಿಬ್ಬಂದಿಯೊಬ್ಬರು ರಂಗನಾಥ ಅವರ ದೂರಿನ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದರು. ಇದು ಕುಲಪತಿ ಗಮನಕ್ಕೆ ಬಂದಿದ್ದು, ನೋಟಿಸ್ ನೀಡಲಾಗಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿದೆ. ಇಲಾಖೆಯ ಅನುಮತಿಯ ಮೇಲೆ ತನಿಖೆ ನಡೆಯಲಿದೆ. ಲೋಕಾಯುಕ್ತ ನಿವೃತ್ತ ಹೆಚ್ಚುವರಿ ರಿಜಿಸ್ಟ್ರಾರ್ ವಿದ್ಯಾಧರ ಅವರ ಏಕಸದಸ್ಯ ತನಿಖಾ ಸಮಿತಿ ರಚಿಸಿದ್ದು, ತನಿಖೆ ಆರಂಭವಾಗಿದೆ ಎಂದು ಶಿವಲಿಂಗಯ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ತನಿಖೆಯ ಬಳಿಕ ವರದಿ ಆಧರಿಸಿ ಕ್ರಮ ವಹಿಸಲಾಗು ವುದು. ಇದರಿಂದ ತಮ್ಮ ಮಾನ ನಷ್ಟವಾಗಿದ್ದು, ತಮ್ಮ ಅಧಿಕಾರಾ ವಧಿ ಪೂರ್ಣಗೊಂಡ ಬಳಿಕವೂ ವೈಯಕ್ತಿಕವಾಗಿ ಪ್ರಕರಣ ಮುಂದು ವರೆಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.