ADVERTISEMENT

ಜಯಪುರ: ಅಣಬೆ ಬೇಸಾಯ ತರಬೇತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 7:57 IST
Last Updated 19 ಡಿಸೆಂಬರ್ 2025, 7:57 IST
ಅ
   

ಜಯಪುರ: ಹೋಬಳಿ ರೈತ ಸಂಪರ್ಕ ಕೇಂದ್ರದ ವತಿಯಿಂದ 2025–26ನೇ ಸಾಲಿನ ಆತ್ಮ ಯೋಜನೆಯಡಿ ಮಹಿಳಾ ಸ್ವ‌–ಸಹಾಯ ಸಂಘದ ಸದಸ್ಯರಿಗೆ ಜಯಪುರ ಗ್ರಾಮದ ವಾಲ್ಮೀಕಿ ಭವನದಲ್ಲಿ ಗುರುವಾರ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ಅಣಬೆ ಬೇಸಾಯ ತರಬೇತಿ ನೀಡಲಾಯಿತು.

ಬೇಸಾಯದ ಬಗ್ಗೆ ಮಾಹಿತಿ ತಜ್ಞರಾದ ರಾಜು ಬಡ್ಡಿಯಾರ್ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು. ಜಯಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಅರುಣಾ ಅವರು ಕೃಷಿ ಇಲಾಖೆಯಿಂದ ದೊರೆಯುವ ಸಹಾಯಧನ ಸೌಲಭ್ಯಗಳ ಮಾಹಿತಿ ನೀಡಿದರು.

ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರವೀಣ್, ಆತ್ಮ ಯೋಜನೆ ಉಪಯೋಜನೆಯ ನಿರ್ದೇಶಕ ಸತೀಶ್, ತಾಂತ್ರಿಕ ವ್ಯವಸ್ಥಾಪಕಿ ಪಲ್ಲವಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.