ಮೈಸೂರು: ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಪರಸ್ಪರ ಸಹಕಾರ ನೀಡಲು ನಗರದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‌ಎಸ್ಎಎಚ್‌ಇಆರ್) ಮತ್ತು ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಚೆನ್ನೈ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡವು.
ಇಲ್ಲಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಎಎಚ್‌ಇಆರ್ ಕುಲಪತಿ ಎಚ್.ಬಸವನಗೌಡಪ್ಪ ಹಾಗೂ ವಿಐಟಿ, ಚೆನ್ನೈ ಪ್ರತಿನಿಧಿ, ಉಪಕುಲಪತಿ ಟಿ.ತ್ಯಾಗರಾಜನ್ ಒಡಂಬಡಿಕೆಗೆ ಸಹಿ ಹಾಕಿದರು.
ಸಹಭಾಗಿತ್ವದಿಂದ ಸಂಶೋಧನೆಯ ಪ್ರಾರಂಭ, ಬೋಧಕ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು, ನವೋನ್ನತ ಸಹಕಾರಗಳು, ಆರೋಗ್ಯ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಜೈವಿಕ ಅಭಿವೃದ್ಧಿ ಮತ್ತು ಹಲವು ವಿಷಯಗಳ ವಿದ್ಯಾಭ್ಯಾಸದ ಸಂಶೋಧನೆಗೆ ಸಹಕಾರಿಯಾಗಲಿದೆ.
ಅಕಾಡೆಮಿ ಉಪಕುಲಾಧಿಪತಿ ಬಿ.ಸುರೇಶ್, ಡೀನ್ (ಶೈಕ್ಷಣಿಕ) ವಿಶಾಲ್ ಕುಮಾರ್ ಗುಪ್ತ ಮಾತನಾಡಿದರು.
ಕೆರಿಯರ್ ಡೆವಲಪ್‌ಮೆಂಟ್ ಸೆಂಟರ್ ಉಪ ನಿರ್ದೇಶಕ ಗಣೇಸನ್ ಆರ್, ಸೆಂಟರ್ ಫಾರ್ ಹೆಲ್ತ್‌ಕೆರ್ ಅಡ್ವಾನ್ಸ್‌ಮೆಂಟ್ ಇನೋವೇಶನ್ ಅಂಡ್ ರಿಸರ್ಚ್ ನಿರ್ದೇಶಕಿ ಸುಚೇತಾ ಎಂ, ಸೆಂಟರ್ ಫಾರ್ ನ್ಯೂರೋಇನ್‌ಫೋರ್ಮೇಟಿಕ್ಸ್ ಉಪ ನಿರ್ದೇಶಕಿ ಶ್ರೀದೇವಿ ಎಸ್, ಡೀನ್ (ರಿಸರ್ಚ್) ಪ್ರಶಾಂತ್ ಎಂ. ವಿಷ್ವನಾಥ್, ಡೆಪ್ಯುಟಿ ಡೀನ್(ರಿಸರ್ಚ್) ವಿಕ್ರಂ ಪಾಟೀಲ್, ಸ್ಕೂಲ್ ಆಫ್ ಲೈಫ್ ಸೈನ್ಸಸ್ ಮುಖ್ಯಸ್ಥ ಪ್ರೊ.ಕೆ.ಎ.ರವೀಶ, ಜೆಎಸ್ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಿ.ನಾರಾಯಣಪ್ಪ, ಜೆಎಸ್ಎಸ್ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಟಿ.ಎಂ.ಪ್ರಮೋದ್ ಕುಮಾರ್, ಜೆಎಸ್ಎಸ್ ಫಾರ್ಮಸಿ ಕಾಲೇಜು(ಊಟಿ) ಪ್ರಾಂಶುಪಾಲ ಧನಪಾಲ್ ಪಳನಿಸಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.