ADVERTISEMENT

ಸಾಮಾಜಿಕ ಸುಧಾರಣೆಗೆ ಶ್ರಮಿಸಿದ ಸಂತ ಕನಕದಾಸ: ಎಚ್.ಡಿ.ಗಣೇಶ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 2:47 IST
Last Updated 9 ನವೆಂಬರ್ 2025, 2:47 IST
ಪಿರಿಯಾಪಟ್ಟಣ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮೈಲಾಕ್ ಅಧ್ಯಕ್ಷ ಎಚ್.ಡಿ.ಗಣೇಶ್ ಮಾತನಾಡಿದರು. ತಹಶೀಲ್ದಾರ್ ನಿಸರ್ಗ ಪ್ರಿಯ, ಸುನೀಲ್, ನಂದೀಶ್, ಕೃಷ್ಣ ಗೌಡ, ಸಾಲು ಕೊಪ್ಪಲು ಪುಟ್ಟರಾಜು, ರಹಮತ್ ಜಾನ್ ಬಾಬು, ರಾಜಶೇಖರ್ ಭಾಗವಹಿಸಿದ್ದರು
ಪಿರಿಯಾಪಟ್ಟಣ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮೈಲಾಕ್ ಅಧ್ಯಕ್ಷ ಎಚ್.ಡಿ.ಗಣೇಶ್ ಮಾತನಾಡಿದರು. ತಹಶೀಲ್ದಾರ್ ನಿಸರ್ಗ ಪ್ರಿಯ, ಸುನೀಲ್, ನಂದೀಶ್, ಕೃಷ್ಣ ಗೌಡ, ಸಾಲು ಕೊಪ್ಪಲು ಪುಟ್ಟರಾಜು, ರಹಮತ್ ಜಾನ್ ಬಾಬು, ರಾಜಶೇಖರ್ ಭಾಗವಹಿಸಿದ್ದರು   

ಪಿರಿಯಾಪಟ್ಟಣ: ‘ಕನಕದಾಸರ ಸಾಹಿತ್ಯ ಸಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದೆ’ ಎಂದು ಮೈಲಾಕ್ ಅಧ್ಯಕ್ಷ ಎಚ್.ಡಿ.ಗಣೇಶ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಕನಕದಾಸರ ಆದರ್ಶ ನಮಗೆ ಸ್ಫೂರ್ತಿಯಾಗಿದ್ದು, ತಮ್ಮ ಕೀರ್ತನೆ, ಸಾಹಿತ್ಯದ ಮೂಲಕ ಸಾಮಾಜಿಕ ಸುಧಾರಣೆಗೆ ಶ್ರಮಿಸಿದ್ದಾರೆ. ಇಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ’ ಎಂದರು.

ADVERTISEMENT

ಹುಣಸೂರಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಸ್.ಮಹದೇವ್ ಮಾತನಾಡಿದರು.

ತಹಶೀಲ್ದಾರ್ ನಿಸರ್ಗ ಪ್ರಿಯ, ತಾಲ್ಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ರಹಮತ್ ಜಾನ್ ಬಾಬು, ರಾಜಶೇಖರ್, ಪುರಸಭೆ ಸದಸ್ಯ ರವಿ, ಕೆಡಿಪಿ ಸದಸ್ಯ ಆಯಿತನಳ್ಳಿ ಮಹದೇವ್, ತಾ.ಪಂ. ಮಾಜಿ ಸದಸ್ಯ ಎ.ಟಿ.ರಂಗಸ್ವಮಿ, ಆರ್.ಎಸ್. ಮಹದೇವ್, ಟಿ.ಈರಯ್ಯ, ಪುಟ್ಟಯ್ಯ, ಜವರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹೊಸಳ್ಳಿ ಕೃಷ್ಣೆಗೌಡ, ರಂಗನಾಥ್, ಮುಖಂಡರಾದ ನಂದೀಶ್, ಕೃಷ್ಣ ಗೌಡ, ಸಾಲು ಕೊಪ್ಪಲು ಪುಟ್ಟರಾಜು, ಸಿಬ್ಬಂದಿ ಜಯಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.