
ಮೈಸೂರು: ಡಾ.ಕೆ.ಕೃಷ್ಣ ಮೂರ್ತಿ ಸಂಶೋಧನಾ ಪ್ರತಿಷ್ಠಾನ ಮತ್ತು ವಿದ್ಯುತ್ ಪ್ರಕಾಶನವು ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಲೀಲಾಪ್ರಕಾಶ್ ವಿರಚಿತ ‘ಪಂಚತಂತ್ರ–ಭಾಗ–1 (ಮಿತ್ರಭೇದ)’, ‘ಭಗವದ್ಗೀತಾ ಸಾರ ಸಂಗ್ರಹ’ ಮತ್ತು ಕಬ್ಬಿನಾಲೆ ವಸಂತ ಭಾರದ್ವಾಜ ಅವರ ‘ಹರಿದಾಸರ ಮಂಡಿಗೆಗಳು’ ಕೃತಿಗಳನ್ನು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿ, ‘ಓದಿನ ಸಂಸ್ಕೃತಿ ಹೆಚ್ಚಬೇಕಿದ್ದು, ಸಾಹಿತ್ಯದ ಕುರಿತ ಕಾರ್ಯಕ್ರಮಗಳು ಅವುಗಳಿಗೆ ಪ್ರೋತ್ಸಾಹ ನೀಡುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಕೆ.ಲೀಲಾ ಪ್ರಕಾಶ್ ಉತ್ತಮ ಕೊಡುಗೆ ನೀಡುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಕನ್ನಡದ ಕುರಿತ ಕೆಲಸಗಳಿಂದ ಭಾಷೆ ಬೆಳೆಯಲು ಸಾಧ್ಯ’ ಎಂದು ಹೇಳಿದರು.
ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಲೇಖಕಿ ಕೆ.ಲೀಲಾ ಪ್ರಕಾಶ್, ಸಂಚಾಲಕ ಸಿ.ಎನ್. ಕೇಶವ ಪ್ರಕಾಶ್, ಕಬ್ಬಿನಾಲೆ ವಸಂತ ಭಾರಧ್ವಾಜ, ಸಾಹಿತಿ ರಂಗನಾಥ್ ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.