
ಮೈಸೂರು: ದಕ್ಷಿಣ ಕನ್ನಡ ಜಿಲ್ಲೆ ತಂಡದವರು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಏರ್ಪಡಿಸಿದ್ದ ರಾಜ್ಯ ಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ಕೂಟದ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯವಾದ 3 ದಿನಗಳ ಕೂಟದಲ್ಲಿ ದಕ್ಷಿಣ ಕನ್ನಡ ತಂಡದವರು 62 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದರು. ಅದೇ ಜಿಲ್ಲೆಯ ನಾಗಿಣಿ 20 ಅಂಕದೊಂದಿಗೆ ಅತ್ಯುತ್ತಮ ಅಥ್ಲಿಟ್ ಆಗಿ ಹೊಮ್ಮಿ ವೈಯಕ್ತಿಕ ಬಹುಮಾನ ಗೆದ್ದರು.
ಫಲಿತಾಂಶ: ಜಾವೆಲಿನ್ ಥ್ರೋ: ಸಿ.ಜೆ.ಭವ್ಯಾ (ಬೆಳಗಾವಿ, ದೂರ: 42.10 ಮೀಟರ್ಸ್)–1, ಗಾಯತ್ರಿ ಗಿರೀಶ್ ಕದಂ–2, ಮಾನ್ಯಾ (ಉಡುಪಿ)–1, ಕ್ರಾಸ್ ಕಂಟ್ರಿ: ನಾಗಿಣಿ (ದಕ್ಷಿಣ ಕನ್ನಡ, ಕಾಲ: 12 ನಿಮಿಷ 22.37)–1, ಚರಿಷ್ಮಾ–2, ಸಂತೋಷಿ ಸುರೇಶ್ ರೆಡೇಕರ್ (ಕೊಡಗು)–3. ಪೋಲ್ ವಾಲ್ಟ್: ಧನ್ಯಾ (ದಕ್ಷಿಣ ಕನ್ನಡ. ಎತ್ತರ: 2.70 ಮೀ.)–1, ದಿವ್ಯಾ ಚಂದ್ರಶೇಖರ ನಾಯಕ್ (ಉತ್ತರ ಕನ್ನಡ)–2, ದೀಪಿಕಾ (ದಕ್ಷಿಣ ಕನ್ನಡ)–3.
4X400 ಮೀಟರ್ಸ್ ರಿಲೇ: ಜಾನವಿ, ನಾಗಿನಿ, ಚರಿಷ್ಮಾ, ನಿರ್ಮಲಾ (ದಕ್ಷಿಣ ಕನ್ನಡ, ಕಾಲ: 4 ನಿಮಿಷ 08.10 ಸೆಕೆಂಡ್)–1, ನಿಕಿತಾ, ಅನನ್ಯಾ, ಮಾನ್ಯಾ, ಜಯಲಕ್ಷ್ಮಿ (ಉಡುಪಿ)–2, ಅಕ್ಷರ ಮಜುಕರ್, ದಕ್ಷತಾ, ಪ್ರಯುಜಾ ಗುರವ್, ದಿವ್ಯಾ ದೋಲೇಕರ (ಬೆಳಗಾವಿ)–3. 100 ಮೀಟರ್ಸ್ ಓಟ: ಜಿ.ಗೋಪಿಕಾ (ದಕ್ಷಿಣ ಕನ್ನಡ, ಕಾಲ: 12.30 ಸೆಕೆಂಡ್)–1, ಎಂ.ಮಮತಾ (ಮೈಸೂರು)–2, ನಿಧೀಕ್ಷಾ ನಾಯ್ಕ್ (ದಕ್ಷಿಣ ಕನ್ನಡ)–3.
ಆರ್.ವಿ. ವಿಶ್ವವಿದ್ಯಾಲಯದ ನಿರ್ದೇಶಕ ಬಿ.ಎಸ್. ನಾಗೇಂದ್ರ ಪರಾಶರ್, ಡಿಡಿಪಿಯು ಎಂ.ಪಿ.ನಾಗಮ್ಮ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸಿ.ವೆಂಕಟೇಶ್, ಆರ್.ವಿ. ಪಿಯು ಕಾಲೇಜಿನ ಕಾರ್ಯಕ್ರಮ ಸಂಯೋಜಕ ಅಶ್ವಿನ್ ರಾಜ್, ಕ್ರೀಡಾ ಸಂಯೋಜಕ ಕೆ.ಆರ್.ಮುರಳೀಧರ್, ಶಿವಕುಮಾರ್, ಮಂಜುನಾಥ್, ಸುದರ್ಶನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.