
ತಿ. ನರಸೀಪುರ ತಾಲ್ಲೂಕಿನ ಕೆಂಡನಕೊಪ್ಪಲು ಗ್ರಾಮದ ಜಮೀನಿನಲ್ಲಿ ಮಳೆ ನೀರು ನಿಂತಿದ್ದು, ಭತ್ತದ ನಾಟಿಗೆ ಅಡ್ಡಿಯಾಯಿತು
ಮೈಸೂರು/ಕೊಡಗು: ಮೈಸೂರು ಭಾಗದ ಜಿಲ್ಲೆಗಳಲ್ಲಿ ಮಂಗಳವಾರ ತಡರಾತ್ರಿ ಮತ್ತು ಕೊಡಗಿನಲ್ಲಿ ಬುಧವಾರ ಬುಧವಾರ ಉತ್ತಮ ಮಳೆಯಾಯಿತು. ಚಾಮರಾಜನಗರ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾದರೂ ಬಿರುಗಾಳಿಗೆ ಮರಗಳು ಉರುಳಿ ಬಿದ್ದಿವೆ.
ಮೈಸೂರು ನಗರದಲ್ಲಿ ರಾತ್ರಿ 11.30ರ ಸುಮಾರಿಗೆ ಮಳೆ ಆರಂಭ ಗೊಂಡು, ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. 3–4 ದಿನಗಳಿಂದಲೂ ಸಾಧಾರಣ ಮಳೆಯಾಗುತ್ತಿದ್ದು, ಅಲ್ಲಲ್ಲಿ ರಾಶಿ ಹಾಕಲಾದ ರಾಗಿ ತೋಯ್ದು ಹಾನಿಯಾಗಿದೆ. ಸಾಕಷ್ಟು ಕಡೆ ಜಮೀನುಗಳಲ್ಲಿ ನೀರು ನಿಂತಿದೆ.
ಕಾವೇರಿ ನದಿ ಪಾತ್ರದಲ್ಲಿರುವ ತಿ.ನರಸೀಪುರ ತಾಲ್ಲೂಕಿನ ಕೆಂಡನ ಕೊಪ್ಪಲು, ಕೋಳಿಮಲ್ಲನ ಹುಂಡಿ ಹಾಗೂ ಸೋಸಲೆ ಗ್ರಾಮದ ಹಲವು ಜಮೀನುಗಳಿಗೆ ಮಳೆ ನೀರು ನುಗ್ಗಿದ್ದು, ಭತ್ತದ ನಾಟಿಗೆ ಹಿನ್ನಡೆ ಆಗಿದೆ.
ಕೊಡಗಿನ ವಿರಾಜಪೇಟೆ, ಸಿದ್ಧಾಪುರ ಶನಿವಾರಸಂತೆ, ನಾಪೋಕ್ಲು ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗಿದೆ. ಕಾಫಿ ಕೊಯ್ಲು ಮುಗಿದಿರುವ ತೋಟಗಳಲ್ಲಿ ಹೂವು ಅರಳಲು ಸಹಾಯಕವಾಗಿದೆ.
ಶಿವಮೊಗ್ಗ ವರದಿ: ಜಿಲ್ಲೆಯ ಮಲೆನಾಡು ಪ್ರದೇಶದ ಕೆಲವೆಡೆ ಬುಧವಾರ ಮಳೆ ಸುರಿದಿದೆ. ಬೇಸಿಗೆ ಆರಂಭದಲ್ಲಿಯೇ ಮಳೆಯ ಸಿಂಚನವಾಗಿದ್ದು, ತಂಪಾದ ವಾತಾವರಣ ಸೃಷ್ಟಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹೊಸನಗರ, ರಿಪ್ಪನ್‌ಪೇಟೆ, ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಹಾಗೂ ಸಾಗರದಲ್ಲಿ ಮಳೆಯಾಗಿದೆ. ರಿಪ್ಪನ್‌ಪೇಟೆ ಸುತ್ತಮುತ್ತ ಜೋರು ಮಳೆ ಆಗಿದೆ.
ಬೆಳ್ತಂಗಡಿ ತಾಲ್ಲೂಕಿನ ಕೆಲವೆಡೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ಬಾಳೆಹೊನ್ನೂರು, ಕೊಪ್ಪ ಭಾಗದಲ್ಲಿ ಬುಧವಾರ ಮಳೆ ಸುರಿಯಿತು.
ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಕೆಲವೆಡೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ಬಾಳೆಹೊನ್ನೂರು, ಕೊಪ್ಪ ಭಾಗದಲ್ಲಿ ಬುಧವಾರ ಮಳೆ ಸುರಿಯಿತು.
ಬೆಳಿಗ್ಗೆಯಿಂದ ಮೋಡ ಕವಿದಿತ್ತು. ಮಳೆಯಿಂದ ವಾತಾವರಣದಲ್ಲಿ ಕೊಂಚ ತಂಪಿನ ಅನುಭವವಾಯಿತು.
ಹಲವೆಡೆ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಕೆ ಮಳೆಗೆ ಒದ್ದೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.