
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದ ಸಿದ್ದಪ್ಪಾಜಿ ದೇವಾಲಯದಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಸೋಮವಾರ ವಿಶೇಷ ಪೂಜೆ ಸಂಭ್ರಮದಿಂದ ನೆರವೇರಿತು.
ಪ್ರತಿವರ್ಷದಂತೆ ಕುದಿಯುತ್ತಿರುವ ಎಣ್ಣೆಯಲ್ಲಿ ಕಜ್ಜಾಯ ಎತ್ತುವ ಪೂಜೆ ಭಕ್ತರ ಗಮನ ಸೆಳೆಯಿತು. ಸೋಮವಾರ ಬೆಳಿಗ್ಗೆ ನಡೆದ ಧಾರ್ಮಿಕ ವಿಧಿ- ವಿಧಾನಗಳ ನಂತರ ದೇವಾಲಯದ ಅರ್ಚಕ ಸಿದ್ಧರಾಜು ಅವರು ಕುದಿಯುತ್ತಿರುವ ಎಣ್ಣೆಯಿಂದ ಕಜ್ಜಾಯವನ್ನು ಎತ್ತುವ ಕಾರ್ಯ ನೆರವೇರಿಸಿದರು. ನಂತರ ಆ ಎಣ್ಣೆಯನ್ನು ತೀರ್ಥರೂಪದಲ್ಲಿ ಭಕ್ತರಿಗೆ ಎರಚುವ ಮೂಲಕ ಆಶೀರ್ವಾದ ನೀಡಿದರು.
ಲೊಕ್ಕನಹಳ್ಳಿ, ಹುತ್ತೂರು, ಪಿಜಿಪಾಳ್ಯ, ಒಡೆಯರಪಾಳ್ಯ ಸೇರಿ ಅನೇಕ ಕಡೆಗಳಿಂದ ಭಕ್ತರು ಆಗಮಿಸಿ ಸಿದ್ದಪ್ಪಾಜಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.