ADVERTISEMENT

ಮೈಸೂರು: ವಿವಿಧ ಕ್ಷೇತ್ರಗಳ ಸಾಧಕರಿಗೆ ಕಸಾಪ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 7:05 IST
Last Updated 10 ನವೆಂಬರ್ 2025, 7:05 IST
ಕಸಾಪ ಭವನದಲ್ಲಿ ಭಾನುವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಡಾ. ತಿಮ್ಮಯ್ಯ ‘ರಾಜ್ಯೋತ್ಸವ’ ಪ್ರಶಸ್ತಿ ನೀಡಿದರು. ಮಡ್ಡಿಕೆರೆ ಗೋಪಾಲ್ ಜೊತೆಗಿದ್ದರು
ಕಸಾಪ ಭವನದಲ್ಲಿ ಭಾನುವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ಡಾ. ತಿಮ್ಮಯ್ಯ ‘ರಾಜ್ಯೋತ್ಸವ’ ಪ್ರಶಸ್ತಿ ನೀಡಿದರು. ಮಡ್ಡಿಕೆರೆ ಗೋಪಾಲ್ ಜೊತೆಗಿದ್ದರು   

ಮೈಸೂರು: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕವು ಕಸಾಪ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಧಾನಪರಿಷತ್‌ ಸದಸ್ಯ ಡಾ.ತಿಮ್ಮಯ್ಯ ಸಾಧಕರನ್ನು ಅಭಿನಂದಿಸಿದರು.

‘ಹುಟ್ಟಿದ ಮೇಲೆ ಸಾಧಕರಾಗಬೇಕೆ ಹೊರತು ಬಾಧಕರಾಗಬಾರದು. ಪ್ರತಿಯೊಬ್ಬರೂ ನಿಮ್ಮಿಂದ ಸಾಧ್ಯವಾಗುವ ಮಟ್ಟದಲ್ಲಿ ಸಹಾಯದ ಸಾಧನೆ ಮಾಡಬೇಕು. ನಂಬಿಕೆ ದ್ರೋಹ ಮಾಡಬಾರದು. ಕೊಲೆ-ಸುಲಿಗೆ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಮ.ನ. ಲತಾಮೋಹನ್‌ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು:

ಎಚ್‌.ಎಸ್‌. ಹರಿಶಂಕರ್‌ (ಸಂಶೋಧನೆ), ಮಣಿಶೇಖರ್‌ (ಕರಕುಶಲ), ಪ್ರಭಾಶಾಸ್ತ್ರಿ ಜೋಶ್ಯುಲ (ಸಾಹಿತ್ಯ), ಬಿ.ಆರ್‌. ನಾಗರತ್ನಾ(ಸಾಹಿತ್ಯ), ಬಲ್ಲೇನಹಳ್ಳಿ ವಿಜಯಕುಮಾರ್‌ (ಸಾಹಿತ್ಯ), ಅನಿತಾ ವಿಮಲ ಬ್ರಾಗ್ಸ್‌ (ಆಡಳಿತ), ಲೀಲಾವತಿ (ರಂಗಭೂಮಿ), ಯಶೋಧ ರಾಮಕೃಷ್ಣ (ಸಾಹಿತ್ಯ), ಡಾ.ಸೌಗಂಧಿಕಾ ಜೋಯಿಸ್‌ (ಸಂಘಟನೆ), ಪದ್ಮಾ ಪಾಂಡುರಂಗ (ನಿರೂಪಣೆ), ಡಾ. ಪೂವಮ್ಮ (ವೈದ್ಯಕೀಯ), ಡಾ.ಅಖಿಲಾ (ಸಂಶೋಧನೆ), ಎನ್‌.ಆರ್‌. ರೂಪಶ್ರೀ (ಸಾಹಿತ್ಯ), ಸುಜನಾ (ಸಮಾಜಸೇವೆ), ಎಂ.ಎಸ್‌. ಉಷಾ ಪ್ರಕಾಶ್‌ (ಸಾಹಿತ್ಯ), ಕೆ.ಲಕ್ಷ್ಮಿ (ಸಾಹಿತ್ಯ), ಪ್ರೊ.ಎಂ.ಎಸ್‌. ಮನೋನ್ಮಣಿ (ಶಿಕ್ಷಣ), ಎಂ.ಸಿ. ಮಂಜುಳಾ (ಸಾಹಿತ್ಯ), ಭಾರತಿ ಪ್ರಸಾದ್‌ (ಸಾಹಿತ್ಯ), ಮಾಚಮ್ಮ ಮಲ್ಲಿಗೆ (ಪತ್ರಿಕೋದ್ಯಮ).

ಎನ್‌.ಆರ್‌. ಚಂದ್ರೇಗೌಡ (ಶೈಕ್ಷಣಿಕ), ಎಚ್‌.ಎಲ್‌. ಶಿವಬಸಪ್ಪ (ಸಾಹಿತ್ಯ), ಅವರೇಕಾಡು ವಿಜಯಕುಮಾರ್‌ (ಸಾಹಿತ್ಯ), ಎಂ.ಕೆ. ಗಿರೀಶ್‌ ಚಂದ್ರ (ಸಮುದಾಯ ಸೇವೆ), ಅಂಟೋರ ಅಕ್ತರ್‌ (ಭರತನಾಟ್ಯ), ಚಂದ್ರಪ್ಪ (ರಂಗಭೂಮಿ), ಸರಸ್ವತಿ ಶೆಟ್ಟಿ (ಸಮಾಜಸೇವೆ), ಪಿ.ದೇವರಾಜು ಚಿಕ್ಕಳ್ಳಿ (ಶಿಕ್ಷಣ), ಎ.ಜಿ.ಸುರ್(ನ್ಯಾಯಾಂಗ), ಸಿ.ಮಲೆಯೂರು ಪ್ರಭುಸ್ವಾಮಿ (ಸಮಾಜಸೇವೆ), ಅಲಮೇಲಮ್ಮ (ಸಂಘಟನೆ), ಎಚ್‌.ಎ.ಯಾದವ ಹರೀಶ (ಸಮಾಜಸೇವೆ), ಎಸ್‌.ಜ್ಞಾನೇಶ್ವರ್‌ (ಕ್ರೀಡೆ), ಪ್ರೀತಮ್‌ (ಗಾಯನ), ಮಹದೇವಮ್ಮ (ಸಮಾಜಸೇವೆ), ಡಾ. ಚಿನ್ನನಾಗಪ್ಪ (ವೈದ್ಯಕೀಯ), ಕಾಳಿಹುಂಡಿ ಶಿವಕುಮಾರ್‌ (ಸಂಗ್ರಹ), ವೀಣಾ ಕದಂಬ (ಸಾಹಿತ್ಯ), ಸ್ವರೂಪರಾಣಿ (ಪರಿಸರ), ಭವತಾರಿಣಿ (ಗಾಯನ), ಶೋಭಾ ಚಲುವಯ್ಯ (ಶಿಕ್ಷಣ), ಪದ್ಮಾವತಿ (ಸಮಾಜಸೇವೆ), ಸೌರವ್‌ (ಶೈಕ್ಷಣಿಕ), ಪಿ.ಗಿರೀಶ್‌ (ಸಮುದಾಯ ಸೇವೆ), ಶಿವಶಂಕರ್‌ (ಕರಕುಶಲ), ಚನ್ನಬಸಪ್ಪ (ಧಾರ್ಮಿಕ), ಎಚ್‌.ಎಸ್‌. ಲೋಕೇಶ್‌ (ಜನಪದ), ಸಿ.ನಾಗರಾಜು (ಬಯಲು ನಾಟಕ), ಕೆ.ಹರ್ಷಿಣಿ (ಶಿಕ್ಷಣ) ಎಂ.ಶಿವರಾಜ್‌ (ಸಮಾಜಸೇವೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.