ತಲಕಾಡು: ಇಲ್ಲಿನ ಹಳೆ ಬೀದಿಯ ಬಾಲಕೃಷ್ಣಾನಂದ ಮಠದ 4ನೇ ವರ್ಷದ ಕಾವೇರಿ ಆರತಿ ಕಾರ್ಯಕ್ರಮ ನ.15ರಂದು ಬೆಳಿಗ್ಗೆ 6.30ಕ್ಕೆ ಮಠದ ಪೀಠಾಧಿಪತಿ ಗೋವಿಂದಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ನಾಲ್ಕು ವರ್ಷಗಳಿಂದ ಕಾರ್ತಿಕ ಮಾಸದ ಹುಣ್ಣಿಮೆ ಶುಭ ಶುಕ್ರವಾರದ ದಿವಸ ಕಾವೇರಿ ನಿಸರ್ಗಧಾಮದ ನದಿ ತೀರದಲ್ಲಿ ದೀಪಾಲಂಕಾರದೊಂದಿಗೆ ಉತ್ತರ ಭಾರತದ ಮಾದರಿಯಲ್ಲಿ ‘ದಕ್ಷಿಣ ಕಾಶಿ’ ಎಂದು ಪ್ರಸಿದ್ಧಿ ಪಡೆದಿರುವ ತಲಕಾಡಿನ ಪಂಚಲಿಂಗ ದೇವಾಲಯಗಳ ಸನ್ನಿಧಿಯಲ್ಲಿ ನಡೆಯಲಿದೆ.
ಕಾವೇರಿ ನದಿಯ ಮಹತ್ವವನ್ನು ಸಾರುವ ಕಾರ್ಯಕ್ರಮಕ್ಕೆ ನಾನಾ ಭಾಗದಿಂದ ಆಗಮಿಸುವ ಭಕ್ತರಿಗೆ ನದಿ ತೀರದಲ್ಲಿ ಆಧ್ಯಾತ್ಮಿಕ, ಜಾನಪದ, ಕೃಷಿ ಸಂಪನ್ಮೂಲ ಭಕ್ತಿಯ ನದಿಯ ಬಗ್ಗೆ ಅರಿವು ಮೂಡಿಸುವ ಮಹಾ ಉದ್ದೇಶದಿಂದ ಮಠದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಲಕಾಡಿನ ಕಾವೇರಿ ನದಿಯ ನಿಸರ್ಗದ ಮಡಲಿನ ಪಂಚಲಿಂಗ ದೇವಾಲಯಗಳು ವೈದ್ಯನಾಥೇಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುನ ಸ್ವಾಮಿ ಮರಳೇಶ್ವರ, ಹಾಗೂ ಅರ್ಕೇಶ್ವರ ಚೌಡೇಶ್ವರಿ ದೇವಿ,ಕೀರ್ತಿ ನಾರಾಯಣ ಸ್ವಾಮಿ ದೇವಾಲಯಗಳ ಮಹಾಧಾರ್ಮಿಕ ಕ್ಷೇತ್ರವಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಬೇಕು ಎಂದು ಮಠದ ವ್ಯವಸ್ಥಾಪಕರಾದ ಸುಹಾಸ್, ಭಕ್ತರಾದ ಶ್ರೀನಿವಾಸರಾವ್, ವಾಸು, ಶಾಂತರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.