ತಿ.ನರಸೀಪುರ: ಬನ್ನೂರು ಸಮೀಪದ ಮಾಕನಹಳ್ಳಿ ಬಳಿ ಕಾವೇರಿ ನದಿಯಲ್ಲಿ ನೀರು ಹೆಚ್ಚಾಗಿದ್ದರಿಂದ ನದಿ ದಾಟಲು ಸಾಧ್ಯವಾಗದೇ ಮರವೇರಿ ಕುಳಿತಿದ್ದ ತಂದೆ- ಮಗನನ್ನು ತೆಪ್ಪದವರ ಸಹಕಾರದೊಂದಿಗೆ ಪೊಲೀಸರು ರಕ್ಷಣೆ ಮಾಡಿದರು.
ಮಾಕನಹಳ್ಳಿ ಗ್ರಾಮದ ಕೃಷ್ಣಗೌಡ ಮತ್ತು ಅವರ ಪುತ್ರ ಪ್ರವೀಣ್ ಮಂಗಳವಾರ ಬೆಳಿಗ್ಗೆ ಜಾನುವಾರು ಮೇಯಿಸಲು ನದಿಯ ಮತ್ತೊಂದು ದಡದಲ್ಲಿರುವ ದೇವಿ ತೋಪಿಗೆ ತೆರಳಿದ್ದರು. ಸಂಜೆ ವಾಪಸ್ ಬರುವಾಗ ನದಿಯಲ್ಲಿ ನೀರು ಹೆಚ್ಚಾಗಿದ್ದರಿಂದ ತೋಪಿನಲ್ಲಿದ್ದ ಮರವೇರಿ ಕುಳಿತರು.
ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಬನ್ನೂರು ಠಾಣೆಯ ಇನ್ ಸ್ಪೆಕ್ಟರ್ ಮನೋಜ್ ಕುಮಾರ್ ಮತ್ತು ಸಿಬ್ಬಂದಿ, ದೋಣಿ ನಡೆಸುವ ಉಮೇಶ್ ಅವರನ್ನು ಕರೆಯಿಸಿ ತಂದೆ, ಮಗನನ್ನು ರಕ್ಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.