ಮೈಸೂರು: ಇಲ್ಲಿನ ಈಸ್ಟ್ ವೆಸ್ಟ್ ಅಂತರರಾಷ್ಟ್ರೀಯ ಶಾಲೆ ವಿದ್ಯಾರ್ಥಿಗಳ ತಂಡವು ಈಚೆಗೆ ಗುಜರಾತಿನಲ್ಲಿ ನಡೆದ ಸಿಬಿಎಸ್‌ಸಿ 19 ವರ್ಷದೊಳಗಿನವರ ರಾಷ್ಟ್ರೀಯ ಕೊಕ್ಕೊ ಟೂರ್ನಿಯಲ್ಲಿ 3ನೇ ಸ್ಥಾನ ಗಳಿಸಿದೆ.
ತಂಡದಲ್ಲಿ ಕೆ.ವಿಷ್ಣು (ನಾಯಕ), ಸಿ.ಎ.ಉಲ್ಲಾಸ್ ಗೌಡ, ಯು.ಕಿರಣ್ ಗೌಡ, ಎಂ.ನಿಶಾಂತ್, ಮಿಥುನ್ ಎಂ.ಗೌಡ, ಸಿ.ಕೆ.ಯಶಸ್ ಗೌಡ. ಜಿ.ಎಂ.ಮೋನಿಷ್, ಎಂ.ಸೂರಜ್ ಸಿಂಗ್, ಆರ್.ಕಿರಣ್ ಗೌಡ, ಹರ್ಷಿತ್ ಗೌಡ, ಪಿ.ಗೌತಮ್, ಡಿ.ಶ್ರೇಯಸ್ ಪಾಲ್ಗೊಂಡಿದ್ದರು. ಹೇಮಂತ್ ಅವರು ತಂಡಕ್ಕೆ ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಚೇರ್‌ಪರ್ಸನ್ ಚಿತ್ರಕಲಾ ನಾಗರಾಜ್, ಕಾರ್ಯದರ್ಶಿ ಸಿ.ಎನ್.ಶಶಿಕಿರಣ್, ಜಂಟಿ ಕಾರ್ಯದರ್ಶಿ ಮಮತಾ ಶಶಿಕಿರಣ್, ಪ್ರಾಂಶುಪಾಲ ಎನ್.ವಿವೇಕಾನಂದ ಪ್ರಭು ಅವರು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.