ವಂಚನೆ–ಪ್ರಾತಿನಿಧಿಕ ಚಿತ್ರ
ಕೆ.ಆರ್.ನಗರ (ಮೈಸೂರು ಜಿಲ್ಲೆ): ಬೆಂಗಳೂರಿನ ಕೃಷ್ಣ ರಾಘವನ್ ಎಂಬುವವರು ಇಲ್ಲಿನ ನಿವಾಸಿ ಎ.ಜಿ.ನಂಜೇಶ್ ಅವರ ಪತ್ನಿ ಪಿ.ಎಸ್.ಶಶಿಕಲಾ (73) ಹೆಸರಿನಲ್ಲಿ ಫೈನಾನ್ಸ್ ಕಂಪನಿ ತೆರೆದು ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿರುವ ಕುರಿತು ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದೆ.
‘ರಾಘವನ್ ಹಲವು ವರ್ಷಗಳಿಂದ ಪರಿಚಿತರು. ಆಗಾಗ ಮನೆಗೆ ಬರುತ್ತಿದ್ದರು. ಎರಡು ಫೈನಾನ್ಸ್ ಕಂಪನಿ ಇದೆ, ‘ಎಎಲ್‌ಪಿಎಚ್‌ಎ’ ಕಂಪನಿಗೆ ತಾಯಿ ಶಶಿಕಲಾ ಅವರನ್ನು ಷೇರುದಾರರು, ಪಾಲುದಾರರನ್ನಾಗಿ ಮಾಡುತ್ತೇನೆ ಎನ್ನುತ್ತಿದ್ದರು. 2015ರಲ್ಲಿ ಒತ್ತಾಯದಿಂದ ತಾಯಿಯ ಫೋಟೊ, ಆಧಾರ್, ಪ್ಯಾನ್, ಐಡಿ ಕಾರ್ಡ್ ಪಡೆದಿದ್ದರು’ ಎಂದು ಶಶಿಕಲಾ ಪುತ್ರ ನಿರಂಜನ್ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೆ.ಆರ್.ನಗರ ವಿಳಾಸ ನೀಡಿ ತಾಯಿ ಹೆಸರಿನಲ್ಲಿ ನಕಲಿ ಸಹಿ ಮಾಡಿ ‘ಎಎಲ್‌ಪಿಎ’ ಎಂಬ ಕಂಪನಿ ಪ್ರಾರಂಭಿಸಿ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡಿದ್ದಾರೆ. ಈಗ, ₹14 ಕೋಟಿಗೂ ಅಧಿಕ ತೆರಿಗೆ ಕಟ್ಟುವಂತೆ ನಮಗೆ ನೋಟಿಸ್ ಬಂದಿದ್ದು, ಇದರಿಂದ ನಮಗೆ ಆಘಾತವಾಗಿದೆ’ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.