ADVERTISEMENT

ಕೆ.ಆರ್.ನಗರ |ವಿಚಾರಣಾಧೀನ ಕೈದಿ ಸಾವು: ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 2:46 IST
Last Updated 15 ಅಕ್ಟೋಬರ್ 2025, 2:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೆ.ಆರ್.ನಗರ: ಇಲ್ಲಿನ ಉಪ ಕಾರಾಗೃಹದ ವಿಚಾರಣಾಧೀನ ಕೈದಿ ಸೋಮವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಣಸೂರು ಬನ್ನಿಬೀದಿ ನಿವಾಸಿ ಗಂಗಾಧರ (45) ಮೃತರು. ಇವರಿಗೆ ಪತ್ನಿ ರುಕ್ಮಿಣಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ADVERTISEMENT

‘2016ರಲ್ಲಿ ಕಳ್ಳತನದ ಆರೋಪದ ಮೇಲೆ ಗಂಗಾಧರನನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಗೊಂಡು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದರಿಂದ 2025ರ ಸೆ.3ರಂದು ಆತನನ್ನು ಬಂಧಿಸಿ ಇಲ್ಲಿನ ಉಪ ಕಾರಾಗೃಹಕ್ಕೆ ಕಳುಹಿಸಿಕೊಡಲಾಗಿತ್ತು. ಸೋಮವಾರ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿರುವುದು ಗೊತ್ತಾಯಿತು’ ಎಂದು ಜೈಲು ಅಧಿಕಾರಿ ಸಿ.ಜೆ.ರಘುಪತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತನಿಖೆಗೆ ಒತ್ತಾಯ:

‘ಗಂಗಾಧರನ ಸಾವು ಅನುಮಾನಾಸ್ಪದವಾಗಿದೆ. ಜೈಲಿನಲ್ಲಿ ಎಲ್ಲ ತರಹದ ಸುರಕ್ಷತೆ ಇದ್ದರೂ ಏಕೆ ಸಾವು ಸಂಭವಿಸುತ್ತಿವೆ, ಅಧಿಕಾರಿಗಳ ವೈಫಲವ್ಯೇ? ಎಂಬುದು ಸಮಗ್ರ ತನಿಖೆಯಾಗಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.