ಮೈಸೂರು: ಇಲ್ಲಿನ ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಕೋಲ್ಟ್ಸ್ ಹಾಗೂ ಆಂಧ್ರ ಕ್ರಿಕೆಟ್ ಸಂಸ್ಥೆ ನಡುವಿನ ಕ್ರಿಕೆಟ್ ಪಂದ್ಯ ಕುತೂಹಲದ ಘಟ್ಟ ತಲುಪಿದ್ದು, ಕಡೆಯ ದಿನವಾದ ಶುಕ್ರವಾರ ಆಂಧ್ರ ಗೆಲುವಿಗೆ 8 ವಿಕೆಟ್‌ಗೆ 326 ರನ್ ಬೇಕಿದೆ.
ಕ್ಯಾ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದ ಮೂರನೇ ದಿನವಾದ ಗುರುವಾರ ಆಟ ಮುಂದುವರಿಸಿದ ಆಂಧ್ರ ಮೊದಲ ಇನಿಂಗ್ಸ್‌ನಲ್ಲಿ 223 ರನ್‌ಗೆ ಆಲೌಟ್ ಆಯಿತು. ಕೆ.ಪಿ. ಕಾರ್ತಿಕೇಯ ಹಾಗೂ ಶಿಖರ್ ಶೆಟ್ಟಿ ತಲಾ 3 ವಿಕೆಟ್ ಮೂಲಕ ಎದುರಾಳಿಗಳನ್ನು ನಿಯಂತ್ರಿಸಿದರು.
ಮೊದಲ ಇನಿಂಗ್ಸ್‌ನಲ್ಲಿ 227 ರನ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಕೋಲ್ಸ್ಟ್ ಪರ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ತಂಡವು 8 ವಿಕೆಟ್‌ಗೆ 189 ರನ್ ಗಳಿಸಿದ್ದ ಸಂದರ್ಭ ನಾಯಕ ಅನೀಶ್ವರ್ ಗೌತಮ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಎದುರಾಳಿ ಗೆಲುವಿಗೆ 417 ರನ್‌ಗಳ ಬೃಹತ್ ಗುರಿ ನೀಡಿದರು. ದಿನದಂತ್ಯಕ್ಕೆ ಆಂಧ್ರ 2 ವಿಕೆಟ್ ನಷ್ಟಕ್ಕೆ 90 ರನ್ ಕಲೆಹಾಕಿದ್ದು, ಕೆ. ಮಹೀಪ್ ಕುಮಾರ್ (42) ಹಾಗೂ ಅಶ್ವಿನ್ ಹೆಬ್ಬಾರ್ (7) ಅಜೇಯರಾಗಿ ಉಳಿದಿದ್ದಾರೆ.
ಕೆಎಸ್‌ಸಿಎ ಇಲೆವೆನ್ ತಂಡಕ್ಕೆ ಸೋಲು: ಕುಲ್ವಂತ್ ಖೆಜ್ರೋಲಿಯಾ (36ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ತಂಡವು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ 13 ರನ್‌ಗಳಿಂದ ಕೆಎಸ್‌ಸಿಎ ಇಲೆವೆನ್ ತಂಡವನ್ನು ಮಣಿಸಿತು.
ಸಂಕ್ಷಿಪ್ತ ಸ್ಕೋರ್: ಎಸ್‌ಜೆಸಿಇ ಮೈದಾನ: ಮೊದಲ ಇನಿಂಗ್ಸ್: ಕೆಎಸ್‌ಸಿಎ ಕೋಲ್ಟ್ಸ್: 106.5 ಓವರ್‌ಗಳಲ್ಲಿ 450. ಆಂಧ್ರ ಕ್ರಿಕೆಟ್ ಸಂಸ್ಥೆ: 64.3 ಓವರ್‌ಗಳಲ್ಲಿ223 ( ಅಶ್ವಿನ್ ಹೆಬ್ಬಾರ್ 84, ಗಿರಿನಾಥ್ ರೆಡ್ಡಿ 43, ಕೆ.ಪಿ. ಕಾರ್ತಿಕೇಯ 34ಕ್ಕೆ 3, ಶಿಖರ್ ಶೆಟ್ಟಿ 42ಕ್ಕೆ 3). ಎರಡನೇ ಇನಿಂಗ್ಸ್: ಕೆಎಸ್‌ಸಿಎ ಕೋಲ್ಟ್ಸ್: 48.5 ಓವರ್‌ಗಳಲ್ಲಿ 8 ವಿಕೆಟ್‌ಗೆ 189 ಡಿಕ್ಲೇರ್ ( ಅನೀಶ್ವರ್ ಗೌತಮ್ 38, ಸಂಜಯ್ ಅಶ್ವಿನ್ 36. ಕೆ. ಮಹೀಪ್ ಕುಮಾರ್ 43ಕ್ಕೆ 3, ಎಸ್. ಆಶೀಶ್ 70ಕ್ಕೆ 3). ಆಂಧ್ರ ಕ್ರಿಕೆಟ್ ಸಂಸ್ಥೆ: 30 ಓವರ್‌ಗಳಲ್ಲಿ 2 ವಿಕೆಟ್‌ಗೆ 90 ( ಕೆ. ಮಹೀಪ್ ಕುಮಾರ್ ಔಟಾಗದೇ 42, ರೇವಂತ್ ರೆಡ್ಡಿ 25. ಮೊನಿಷ್ ರೆಡ್ಡಿ 9ಕ್ಕೆ 1, ಎಲ್.ಆರ್. ಕುಮಾರ್ 19ಕ್ಕೆ 1)
ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ, ಮೈಸೂರು: ಮೊದಲ ಇನಿಂಗ್ಸ್: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 158.2 ಓವರ್‌ಗಳಲ್ಲಿ 8 ವಿಕೆಟ್‌ಗೆ 515 ಡಿಕ್ಲೇರ್ ( ಕೆ. ಅಂಕಿತ್ ಔಟಾಗದೇ 214, ಪ್ರಿನ್ ಠಾಕೂರ್ 48. ಪಿ. ಮಹೇಶ್ 125ಕ್ಕೆ 3, ಭಾರ್ಗವ್ ಭಟ್ 129ಕ್ಕೆ 3. ಬರೋಡ ಕ್ರಿಕೆಟ್ ಸಂಸ್ಥೆ: 75 ಓವರ್‌ಗಳಲ್ಲಿ 5 ವಿಕೆಟ್‌ಗೆ 245 ( ಜ್ಯೋತ್ಸಿಲ್ ಸಿಂಗ್ 104, ನಿನಾದ್ ರಥ್ವ 56. ಅರ್ಪಿತ್ ಗುಲೇರಿಯ 31ಕ್ಕೆ 2)
ಚಿನ್ನಸ್ವಾಮಿ ಕ್ರೀಡಾಂಗಣ: ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ: 172 ಮತ್ತು 68.3 ಓವರ್‌ಗಳಲ್ಲಿ 225 (ಹರ್ಷ್ ಗೌಳಿ 40, ಯಶ್ ದುಬೆ 46, ಹರ್ಷಿತ್ ಯಾದವ್ 42; ಅಭಿಲಾಷ್ ಶೆಟ್ಟಿ 28ಕ್ಕೆ 4, ವಿದ್ಯಾಧರ ಪಾಟೀಲ 30ಕ್ಕೆ 2, ಯಶೋವರ್ಧನ್ ಪರಂತಾಪ್ 25ಕ್ಕೆ 3). ಕೆಎಸ್‌ಸಿಎ ಇಲೆವೆನ್: 138 ಮತ್ತು 60 ಓವರ್‌ಗಳಲ್ಲಿ 226 (ಮ್ಯಾಕ್ನೀಲ್ ಹ್ಯಾಡ್ಲಿ 36, ಅನೀಶ್ ಕೆ.ವಿ. 86; ಆರ್ಯನ್ ಪಾಂಡೆ 46ಕ್ಕೆ 3, ಕುಲ್ವಂತ್ ಖೆಜ್ರೋಲಿಯಾ 36ಕ್ಕೆ 3, ಅಧೀರ್ ಪ್ರತಾಪ್ 79ಕ್ಕೆ 4). ಫಲಿತಾಂಶ: ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಗೆ 13 ರನ್‌ಗಳ ಜಯ
ಆಲೂರು 3 ಕ್ರೀಡಾಂಗಣ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್: 315. ಅಸ್ಸಾಂ: 140 ಮತ್ತು 33.1 ಓವರ್‌ಗಳಲ್ಲಿ 2 ವಿಕೆಟ್‌ಗೆ 54
ಆಲೂರು 2 ಕ್ರೀಡಾಂಗಣ: ಮಹಾರಾಷ್ಟ್ರ: 136 ಮತ್ತು 43 ಓವರ್‌ಗಳಲ್ಲಿ 2 ವಿಕೆಟ್‌ಗೆ 127. ಗೋವಾ: 333
ಆರ್‌ಎಸ್‌ಐ ಕ್ರೀಡಾಂಗಣ: ಗುಜರಾತ್: 262. ಮುಂಬೈ: 75 ಓವರ್‌ಗಳಲ್ಲಿ 6 ವಿಕೆಟ್‌ಗೆ 222
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.