ADVERTISEMENT

ಹಂಪಾಪುರ | ಕಯನೈಟ್ ಅದಿರು ಅಕ್ರಮ ಸಾಗಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:36 IST
Last Updated 30 ಜುಲೈ 2023, 15:36 IST
ವಶ ಪಡಡಿಸಿಕೊಂಡಿರುವ ಕಯನೈಟ್ ಅದಿರು ಅಕ್ರಮ ಸಾಗಣೆ ಲಾರಿ 
ವಶ ಪಡಡಿಸಿಕೊಂಡಿರುವ ಕಯನೈಟ್ ಅದಿರು ಅಕ್ರಮ ಸಾಗಣೆ ಲಾರಿ    

ಹಂಪಾಪುರ: ಎಚ್.ಡಿ.ಕೋಟೆ ಪ್ರಾದೇಶಿಕ ವಲಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಯನೈಟ್ ಅದಿರು ತುಂಬಿ ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

‘ಎಸ್.ಎಸ್.ಶಿವಯೋಗಿ, ಮಹಮ್ಮದ್ ಇದ್ರಿಸ್, ಸಿ.ವೆಂಕಟೇಶ್ ಮತ್ತು ವಾಹನ ಚಾಲಕ ಎನ್.ಮಂಜು ಎಂಬುವವರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಇವರೆಲ್ಲರ ಮೇಲೆ ಅರಣ್ಯ ಇಲಾಖೆ ದೂರು ದಾಖಲಿಸಿದ್ದು, ಡಿಸಿಎಫ್ ಬಸವರಾಜ್ ಹಾಗೂ ಎಸಿಎಫ್ ಲಕ್ಷ್ಮಿಕಾಂತ್ ಮಾರ್ಗದರ್ಶನದ ಮೇರೆಗೆ ಲಾರಿ ವಶಪಡಿಸಿಕೊಂಡಿದ್ದೇವೆ’ ಎಂದು ಆರ್‌ಎಪ್ಓ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒಗಳಾದ ಸುನೀತಾ, ಚಂದನ್, ಬೀಟ್ ಫಾರೆಸ್ಟ್ ಪ್ರಸಾದ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.