ADVERTISEMENT

ಸರಗೂರು | ಹಕ್ಕುಪತ್ರ ವಿತರಣೆ ವಿಳಂಬ: ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 8:00 IST
Last Updated 26 ಅಕ್ಟೋಬರ್ 2025, 8:00 IST
ಸರಗೂರು ತಾಲ್ಲೂಕಿನ ಹೊಸ ಬೀರ್ವಾಳು ಗ್ರಾಮಸ್ಥರು ಹಕ್ಕುಪತ್ರ ವಿತರಣೆ ಮಾಡಲು ತಡವಾಗಿರುವುದನ್ನು ಖಂಡಿಸಿ ಸರಗೂರು ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಸರಗೂರು ತಾಲ್ಲೂಕಿನ ಹೊಸ ಬೀರ್ವಾಳು ಗ್ರಾಮಸ್ಥರು ಹಕ್ಕುಪತ್ರ ವಿತರಣೆ ಮಾಡಲು ತಡವಾಗಿರುವುದನ್ನು ಖಂಡಿಸಿ ಸರಗೂರು ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು   

ಸರಗೂರು: ತಾಲ್ಲೂಕಿನ ಹೊಸಬೀರ್ವಾಳು ಗ್ರಾಮಸ್ಥರು ಹಕ್ಕುಪತ್ರ ವಿತರಣೆ ಮಾಡಲು ತಡವಾಗಿರುವುದನ್ನು ಖಂಡಿಸಿ ಸರಗೂರು ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸಾಮಾಜಿಕ ಹೋರಾಟಗಾರ ಗ್ರಾಮೀಣ ಮಹೇಶ್ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ  ಮುಖ್ಯಮಂತ್ರಿ  ಹಾಗೂ ಕಂದಾಯ ಸಚಿವರು ಮುತುವರ್ಜಿ ವಹಿಸಿ ಹಕ್ಕು ಪತ್ರಗಳನ್ನು ವಿತರಿಸಲಾಗಿತ್ತು. ಅದರಲ್ಲಿ ಸರಗೂರು ತಾಲ್ಲೂಕು ಹೊಸಬೀರ್ವಾಳು ಗ್ರಾಮದ 120 ಹಕ್ಕುಪತ್ರಗಳು ಸಹ ಒಳಗೊಂಡಿದ್ದವು. ಸರ್ಕಾರಿ ಲೆಕ್ಕದಲ್ಲಿ ಈಗಾಗಲೇ ನಮಗೂ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಆದರೆ ಹಕ್ಕು ಪತ್ರಗಳು ಹೊಸಬೀರ್ವಾಳು ಗ್ರಾಮದ ಜನರಿಗೆ ತಲುಪಿಲ್ಲ’ ಎಂದು ದೂರಿದರು.

ಸ್ವಾತಂತ್ರ್ಯದಿನಾಚರಣೆ ಸಮಾರಂಭದಲ್ಲಿ ಹಕ್ಕುಪತ್ರ ವಿತರಿಸುತ್ತೇವೆ ಎಂದು ಕರೆದಿದ್ದರು, ಆ ದಿನ ವಿತರಣೆ ಮಾಡಲಿಲ್ಲ. ಕಳೆದ ತಿಂಗಳು ಸೆ.13ರಂದು ಶಾಸಕರ ನೇತೃತ್ವದಲ್ಲಿ ಹಕ್ಕುಪತ್ರ ನೀಡುತ್ತೇವೆ  ಎಂದಿದ್ದರೂ ನಿರಾಶೆಯಾಯಿತು. ಇಂದು ಅ. 24ರಂದು ಶಾಸಕರ ಜನಸ್ಪಂದನ ಕಾರ್ಯಕ್ರಮವಿದೆ, ವಿತರಿಸುತ್ತೇವೆ ಎಂದಿದ್ದರು. ವಿತರಿಸಿಲ್ಲ ಎಂಬುದಾಗಿ ಗ್ರಾನಸ್ಥರು ದೂರಿದರು.

ADVERTISEMENT

'ಶಾಸಕರು ಜನ ಸ್ಪಂದನ ಕಾರ್ಯಕ್ರಮವನ್ನು ಮುಂದೂಡುತ್ತಿರುವ ಕಾರಣದಿಂದ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿಲ್ಲ’ ಎಂದು ತಹಶೀಲ್ದಾರ್ ಮೋಹನ ಕುಮಾರಿ  ತಿಳಿಸಿದ್ದು, ನವೆಂಬರ್ 1ರಂದು ವಿತರಿಸುತ್ತೇವೆ’ ಎಂದು ಹೇಳುತ್ತಿದ್ದಾರೆ. ಇವರ ಮಾತನ್ನು ನಂಬುವುದು ಹೇಗೆ?’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.