ADVERTISEMENT

ಲ್ಯಾನ್ಸ್‌ಡೌನ್ ಕಟ್ಟಡದ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 10:29 IST
Last Updated 13 ಸೆಪ್ಟೆಂಬರ್ 2019, 10:29 IST

ಮೈಸೂರು: ಶಿಥಿಲಗೊಂಡಿರುವ ಲ್ಯಾನ್ಸ್‌ಡೌನ್‌ ಕಟ್ಟಡದ ಒಂದು ಗೋಡೆ ಕುಸಿದಿದೆ. ಇದರ ಕೆಳಗೆ ಟಾರ್ಪಲಿನ್‌ ಚೀಲ ಹಾಕಿದ್ದರಿಂದ ಅದೃಷ್ಟವಶಾತ್ ಅಪಾಯ ಸಂಭವಿಸಿಲ್ಲ.

ಈ ಕಟ್ಟಡದ ಒಂದು ಗಲ್ಲಿ ಇಂದಿಗೂ ಬಯಲು ಮೂತ್ರ ವಿಸರ್ಜನೆಯ ತಾಣವಾಗಿದೆ. ಇಲ್ಲಿನ ಗೋಡೆಗಳು ಬಿರುಕು ಬಿಟ್ಟಿದ್ದು, ತೀರಾ ಶಿಥಿಲಾವಸ್ಥೆ ತಲುಪಿವೆ. ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದೆ. ಹೀಗಿದ್ದರೂ ಸಾರ್ವಜನಿಕರು ಇಲ್ಲಿ ಮೂತ್ರ ವಿಸರ್ಜಿಸುತ್ತಾರೆ. ಇವರ ಜೀವ ಅಪಾಯದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT