
ಪಿರಿಯಾಪಟ್ಟಣ: ಸರ್ಕಾರಗಳು ರೈತರ ಹಿತ ಕಾಯಲು ಮುಂದಾಗಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಣ್ಣ ಶೆಟ್ಟಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಂಘದ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಸದಸ್ಯರನ್ನು ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡದೆ ಸಂಕಷ್ಟಕ್ಕೆದೂಡುತ್ತಿದೆ.ಭತ್ತ, ರಾಗಿ, ಜೋಳ, ಅವರೇಕಾಳು, ಹುರಳಿ ಕಾಳು, ತೊಗರಿ ಕಾಳು, ಮೆಂತ್ಯ ಕಾಳು ಸೇರಿದಂತೆ ಇನ್ನಿತರೆ ಬೆಳೆಗಳಿಗೆ ಇಂದು ಸೂಕ್ತ ಬೆಂಬಲ ಸಿಗದಂತಾಗಿದೆ ಎಂದರು.
ಈ ಬಗ್ಗೆ ಆಡಳಿತ ಸರ್ಕಾರಗಳಿಗೆ ಸಾಕಷ್ಟು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದು, ಮುತ್ತಿಗೆ ಹಾಕಿ ಸರ್ಕಾರವನ್ನು ಒತ್ತಾಯಿಸಲು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ತಾಲ್ಲೂಕಿನ ವತಿಯಿಂದ ನೂರಾರು ರೈತರು ಪ್ರತಿಭಟನೆಗೆ ತೆರಳುತ್ತಿದ್ದೇವೆ. ರೈತ ಸಂಘಕ್ಕೆ ತನ್ನದೇ ಆದ ಇತಿಹಾಸವಿದೆ ಮತ್ತು ಸಿದ್ಧಾಂತವಿದೆ. ರೈತ ಸಂಘಟನೆಯು ನಾಡಿನ ದೇಶದ ಹಿತವನ್ನು ಬಯಸುವ ಮೂಲಕ ಉತ್ತಮ ಸಂಘಟನೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ಧಾಂತವನ್ನು ಒಪ್ಪಿ ಸಂಘಕ್ಕೆ ಸೇರ್ಪಡೆ ಆದವರು ನಿಯಮಕ್ಕೆ ಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ನೂತನ ಸೇರ್ಪಡೆ : ಕೆ.ಎಸ್. ಶಿವಪ್ಪ ಕೋಮಲಾಪುರ, ಕರಿಗೌಡ, ಸೀಗೆ ಕೋರೆ ಕಾವಲ್, ಗೋವಿಂದ ಬಿಲ್ಲಳ್ಳಿ, ಕರಿ ಗೌಡ ದೇಪುರ, ಅಶೋಕ್ ರಾಜೇಗೌಡ ಆರ್. ತುಂಗಾ, ಪುನಾಡಹಳ್ಳಿ ಲೋಕನಾಥ್, ರಾಜೇಶ್, ವಾಸು, ರಘು, ಅನು, ಹಮ್ಮಿಗೆ ಗೋವಿಂದೇಗೌಡ, ಕರಿಗೌಡ, ಚಪ್ಪರದಹಳ್ಳಿ ವಿನಯ್ ಸಿ.ಆರ್, ಪುನಾಡಹಳ್ಳಿ ಕೊಪ್ಪಲು ಅನಿಲ ಕುಮಾರ್, ಬಾಳೆಕಟ್ಟೆ ಗಣೇಶ್, ಹಮ್ಮಿಗೆ ದೇವೇಂದ್ರ, ತಿರುಮಲಾಪುರ ಸುಬ್ರಮಣ್ಯ, ಸೆಣಬಿನ ಕುಪ್ಪೆ ಕಮಲ, ಬಸವರಾಜು, ಅನಿಲ್ ಶೆಟ್ಟಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಲೋಕೇಶ ರಾಜೇ ಅರಸ್, ಉಪಾಧ್ಯಕ್ಷ ಅಣ್ಣಯ್ಯ ಚಾರ್, ಕಾರ್ಯದರ್ಶಿ ಮಹಮದ್ ಅಶ್ರಫ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಾಸು, ತಾಲೂಕು ಸಹಕಾರ್ಯದರ್ಶಿ ವರೇಶ್, ತಾಲ್ಲೂಕು ಮಹಿಳಾ ಅಧ್ಯಕ್ಷೆ ಅನುಸೂಯಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.