ಪಿರಿಯಾಪಟ್ಟಣ: ಪಟ್ಟಣದ ಹೊರವಲಯದಲ್ಲಿರುವ ಹಳೆಪೇಟೆ ಕಂಠಾಪುರದ ಜಮೀನಿನಲ್ಲಿ ನಿತ್ರಾಣಗೊಂಡ ಸ್ಥಿತಿಯಲ್ಲಿದ್ದ 1.5 ವರ್ಷದ ಗಂಡು ಚಿರತೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ರಕ್ಷಿಸಿದ್ದಾರೆ.
ಗ್ರಾಮಸ್ಥರು ಚಿರತೆಯನ್ನು ಗಮನಿಸಿದ್ದು, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಆರ್‌ಎಫ್‌ಒ ಪದ್ಮಶ್ರೀ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮರಿಯನ್ನು ಸೆರೆಹಿಡಿದಿದ್ದಾರೆ. ಡಾ.ಮಧುಸೂಧನ್ ಅವರು ಮರಿಯನ್ನು ಪರೀಕ್ಷಿಸಿದ್ದು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.
‘ಚಿರತೆ ಮರಿಯು ಎರಡು ಮೂರು ದಿನಗಳಿಂದ ಆಹಾರ ಸಿಗದ ಕಾರಣ ನಿತ್ರಾಣಗೊಂಡಿದೆ, ಜಮೀನಿನ ಅಕ್ಕಪಕ್ಕದಲ್ಲೇ ಅದರ ತಾಯಿ ಚಿರತೆ ಇರುವ ಸಾಧ್ಯತೆಯಿದ್ದು, ಅದರೊಂದಿಗೆ ಸೇರಿಸುವ ಪ್ರಯತ್ನ ಮಾಡಲಾಗುವುದು, ಬೇಟೆಯಾಡಿ ಆಹಾರ ಹುಡುಕಿಕೊಳ್ಳಲು ಸಾಧ್ಯವಿಲ್ಲದ ಕಾರಣ, ತಾಯಿ ಚಿರತೆಯೊಂದಿಗೆ ಸೇರಿಸಲು ಸಾಧ್ಯವಾಗದಿದ್ದರೆ ಪುನರ್ವಸತಿ ಕೇಂದ್ರದ ವಶಕ್ಕೆ ನೀಡಲಾಗುವುದು’ ಎಂದು ಆರ್‌ಎಫ್‌ಒ ಪದ್ಮಶ್ರೀ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.