ಪಿರಿಯಾಪಟ್ಟಣ: ತಾಲ್ಲೂಕಿನ ತಿಮಕಾಪುರ ದಡ ಗ್ರಾಮದ ಖಾಸಗಿ ಜಮೀನಿನಲ್ಲಿ ಚಿರತೆ ಮರಿಗಳು ಕಾಣಿಸಿಕೊಂಡು ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿವೆ.
ಗುರುವಾರ ಮಧ್ಯಾಹ್ನ ತಾಯಿಯಿಂದ ಬೇರ್ಪಟ್ಟಿದ್ದ 3 ಚಿರತೆ ಮರಿಗಳು ಗ್ರಾಮದ ಸುರೇಶ್ ಅವರ ಜಮೀನಲ್ಲಿ ಬೆಳೆದಿದ್ದ ಮುಸುಕಿನ ಜೋಳದೊಳಗೆ ಕಾಣಿಸಿಕೊಂಡಿವೆ.
‘ಗ್ರಾಮಸ್ಥರು ಅರಣ್ಯ ಇಲಾಖೆ ಮಾಹಿತಿ ನೀಡಿದ್ದರೂ ವನ್ಯಜೀವಿ ವಲಯದವರು ಹಾಗೂ ಪಿರಿಯಾಪಟ್ಟಣ ವಲಯ ಅರಣ್ಯಾಧಿಕಾರಿಗಳ ಕಚೇರಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಅದಕ್ಕೆ ಆಗಮಿಸಲು ತಡ ಮಾಡಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಪಿರಿಯಾಪಟ್ಟಣ ವಲಯ ಅರಣ್ಯ ಅಧಿಕಾರಿ ಪದ್ಮಶ್ರೀ ತಮ್ಮ ತಂಡದೊಂದಿಗೆ ಆಗಮಿಸಿದಾಗ ಒಂದು ಮರಿಯನ್ನು ತಾಯಿ ಹೊತ್ತೊಯ್ದಿದೆ. ಎರಡು ಮರಿಗಳನ್ನು ಗಮನಿಸುತ್ತಿರುವ ಅರಣ್ಯ ಇಲಾಖೆಯವರು, ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದು ಆರ್‌ಎಫ್ಒ ಪದ್ಮಶ್ರೀ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.