
ನಂಜನಗೂಡು: ತಾಲ್ಲೂಕು ಬಸವನಪುರದ ಮಲ್ಲನಮೂಲೆ ಸುಕ್ಷೇತ್ರ ಗುರು ಕಂಬಳೇಶ್ವರ ಮಠಾಧ್ಯಕ್ಷರಾಗಿದ್ದ ಚನ್ನಬಸವ ಸ್ವಾಮೀಜಿ (83) ಸೋಮವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಮೈಸೂರಿನ ಜೆಎಸ್‌ಎಸ್ ಅಸ್ಪತ್ರೆಯಲ್ಲಿ ನಿಧನರಾದರು.
ಮಲ್ಲನಮೂಲೆ ಮಠದ 4ನೇ ಶ್ರೀಗಳಾಗಿದ್ದ ಅವರು, ದೇವನೂರಿನ ಮಹಾಂತ ಸ್ವಾಮೀಜಿಯವರ ಸಮಕಾಲೀನರಾಗಿದ್ದರು. ಶ್ರೀಮಠದಿಂದ ಶಾಲೆ ಹಾಗೂ ಹಾಸ್ಟೆಲ್ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ ಮತ್ತು ಅಕ್ಷರ ದಾಸೋಹ ಕಲ್ಪಿಸುವ ಮೂಲಕ ಪ್ರಸಿದ್ಧರಾಗಿದ್ದರು. ಸರಳ–ಸಜ್ಜನಿಕೆಯ ನಡೆ–ನುಡಿಯಿಂದ ಭಕ್ತರಿಗೆ ಪ್ರಿಯವಾಗಿದ್ದರು.
ಮಠದ ಆವರಣದಲ್ಲಿ ಮಂಗಳವಾರ (ನ.11) ಭಕ್ತರು ಹಾಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುತ್ತದೆ. ಮಧ್ಯಾಹ್ನ 2ಕ್ಕೆ ಬಸವನಪುರ ಗ್ರಾಮದಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ 4ರ ಸುಮಾರಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.