
ತಿ.ನರಸೀಪುರ: ಮಹಾ ಶಿವರಾತ್ರಿ ಅಂಗವಾಗಿ ಪಟ್ಟಣದ ತ್ರಿವೇಣಿ ಸಂಗಮದ ಬಳಿಯ ಬಳ್ಳೇಶ್ವರ ಸ್ವಾಮಿ, ತಿರುಮಕೂಡಲಿನ ಶ್ರೀಅಗಸ್ತ್ಯೇಶ್ವರ, ಹಳೇ ಸಂತೆಮಾಳದ ಅನಾದಿ ಮೂಲಸ್ಥಾನೇಶ್ವರ, ಗರ್ಗೇಶ್ವರಿಯ ಗಾರ್ಗೇಶ್ವರ ಸ್ವಾಮಿ ಸೇರಿದಂತೆ ತಾಲ್ಲೂಕಿನ ಗ್ರಾಮಗಳ ಶಿವಾಲಯಗಳಲ್ಲಿ ಭಾನುವಾರ ವಿಶೇಷ ಪೂಜೆ ಜರುಗಿದವು.
ದೇವಾಲಯಗಳಲ್ಲಿ ಮುಂಜಾನೆಯ ಬ್ರಾಹ್ಮಿ ಮೂಹೂರ್ತದಲ್ಲಿ ಶಿವನಿಗೆ ಏಕವಾರ, ದಶವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಭಸ್ಮಾಭಿಷೇಕ, ಬಿಲ್ವಾರ್ಚನೆ, ಗಂಧಾಭಿಷೇಕ, ರುದ್ರಪಾರಾಯಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಬಳ್ಳೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕ ಅರುಣ್ ಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ಪೂಜೆಗಳು, ಸಂಜೆ ಸಾಂಪ್ರದಾಯಿಕ ಪೂಜೆಗಳು ನಡೆದವು. ರಾತ್ರಿ 2 ಗಂಟೆಗಳಿಗೊಮ್ಮೆ ವಿವಿಧ ಅಭಿಷೇಕ, ಸೋಮವಾರ ಮುಂಜಾನೆವರೆಗೂ ನಡೆದವು.
ಆಲಯದಲ್ಲಿರುವ ಶನೇಶ್ವರ, ಆಂಜನೇಯ ಸ್ವಾಮಿ, ಶ್ರೀಸಾಯಿಬಾಬಾ ದೇವರಿಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಮುಂಜಾನೆಯಿಂದಲೇ ದೇವಾಲಯಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ಶಿವನ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.