ADVERTISEMENT

ಬೈಕ್‌ಗಳ ನಡುವೆ ಡಿಕ್ಕಿ‌: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 7:08 IST
Last Updated 4 ಡಿಸೆಂಬರ್ 2025, 7:08 IST
ಮಹದೇವಪ್ಪ
ಮಹದೇವಪ್ಪ   

ಕೊಳ್ಳೇಗಾಲ: ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಬುಧವಾರ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದು ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರು.

ಚೆಲುವನಹಳ್ಳಿ ಗ್ರಾಮದ ಮಹದೇವಪ್ಪ (73) ಮೃತ ಸವಾರ. ಉದ್ದನೂರು ಗ್ರಾಮದಲ್ಲಿ ಪರಿಚಯದವರ ಸಾವಿನ ಕಾರ್ಯ ಮುಗಿಸಿ ತಮ್ಮ ಗ್ರಾಮಕ್ಕೆ ಟಿವಿಎಸ್ ಎಕ್ಸ್ ಎಲ್ ಬೈಕ್‌ನಲ್ಲಿ ವಾಪಸ್‌ ಬರುವಾಗ ದೊಡ್ಡಿಂದುವಾಡಿ ಬಳಿ ವೇಗದಿಂದ ಬಂದ ಪಲ್ಸರ್ ಎನ್ಎಸ್ ಬೈಕ್ ಡಿಕ್ಕಿ ಹೊಡೆದಿದೆ. 

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.