ADVERTISEMENT

ಹುತಾತ್ಮರನ್ನು ನೆನೆದ ಅರಣ್ಯ ಇಲಾಖೆ

ಅರಣ್ಯಭವನದಲ್ಲೊಂದು ಭಾವನಾತ್ಮಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 15:01 IST
Last Updated 11 ಸೆಪ್ಟೆಂಬರ್ 2020, 15:01 IST
ಮೈಸೂರಿನ ಅರಣ್ಯಭವನದಲ್ಲಿ ಶುಕ್ರವಾರ ನಡೆದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮಕರ ಸ್ಮಾರಕಕ್ಕೆ ಗೌರವ ಸಲ್ಲಿಸಲಾಯಿತು
ಮೈಸೂರಿನ ಅರಣ್ಯಭವನದಲ್ಲಿ ಶುಕ್ರವಾರ ನಡೆದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮಕರ ಸ್ಮಾರಕಕ್ಕೆ ಗೌರವ ಸಲ್ಲಿಸಲಾಯಿತು   

ಮೈಸೂರು: ಇಲ್ಲಿನ ಅರಣ್ಯ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ 52 ಮಂದಿ ಹುತಾತ್ಮರ ತ್ಯಾಗ, ಬಲಿದಾನಗಳನ್ನು ನೆನೆಯಲಾಯಿತು. ಅವರ ಸ್ಮಾರಕಕ್ಕೆ ಹೂಗುಚ್ಛಗಳನ್ನಿರಿಸಿ ಗೌರವ ಸಮರ್ಪಿಸಲಾಯಿತು. ವಾಲಿ ಫೈರಿಂಗ್, ಬ್ಯಾಂಡ್‌ ವಾದನ, ರಾಷ್ಟ್ರಗೀತೆ, ಈಚೆಗೆ ಹುತಾತ್ಮರಾದವರ ಸ್ಮರಣೆಗಳು ಸೇರಿದ್ದ ಜನರು ಭಾವಪರವಶಗೊಳ್ಳುವಂತೆ ಮಾಡಿದವು.

ಬೆಳಗಾವಿಯ ಎಂ.ವಿ.ರಂಗನಗೌಡರ್, ಶಂಕರ್ ಮೂಡಲಗಿ, ಜಿ.ಐ.ಹಂಪಯ್ಯ, ಎನ್.ಎ.ಬಸರಿಕಟ್ಟಿ, ಬಿ.ಡಿ.ಖಾನಾಪುರಿ, ಚಾಮರಾಜನಗರದ ಮಾದನಾಯಕ, ಜೋಗೇಗೌಡ, ಹುಚ್ಚಶೆಟ್ಟಿ, ಪಿ.ಶ್ರೀನಿವಾಸ್, ಜಿ.ಕೆ.ಅಣ್ಣಯ್ಯ, ಅಬ್ದುಲ್ ಅಹಮ್ಮದ್, ಅಹಮದ್ ಖಾನ್, ಬಿ.ಸಿ.ಮೋಹನಯ್ಯ, ಹಾಸನದ ಕೆ.ಎನ್.ರಂಗರಾಜರಸ್, ಕೊಡಗು ಜಿಲ್ಲೆಯ ಕೆ.ಎಂ.ಪೃತುಕುಮಾರ್, ಕೆ.ಎಸ್.ವಿಠ್ಠಲ್, ಚಿಕ್ಕಮಗಳೂರಿನ ಎಚ್.ಎ.ಹನುಮಂತಪ್ಪ, ಕಾಳೇಗೌಡ, ಉತ್ತರ ಕನ್ನಡ ಜಿಲ್ಲೆಯ ಅರವಿಂದ್ ಡಿ.ಹೆಗಡೆ, ಶಿವಮೊಗ್ಗದ ಮಂಜುನಾಥಪ್ಪ, ಎಚ್.ಸಿ.ನಾರಾಯಣ, ವೀರಭದ್ರಪ್ಪ, ಎಚ್.ಬಸವಣ್ಣ, ಎಲ್.ಲೋಕೇಶ್, ಎಸ್.ಟಿ.ಗಣೇಶ್, ವೈ.ಹನುಮಂತಪ್ಪ, ಮೈಸೂರಿನ ಪಿ.ಎ.ಪೊನ್ನಪ್ಪ, ಜಿ.ಕೆ.ರಾಮ, ಮುರುಗೆಪ್ಪ ತಮ್ಮನಗೋಳ್, ಎಸ್.ಮಣಿಕಂದನ್, ತುಮಕೂರಿನ ಶ್ರೀನಿವಾಸಯ್ಯ, ರಾಜಶೇಖರಪ್ಪ, ಧಾರವಾಡದ ಎಂ.ಆರ್.ಪೂಜಾರಿ, ಭದ್ರಾ ವನ್ಯಜೀವಿಧಾಮದ ಬಿ.ನಾಗರಾಜು, ಹಳಿಯಾಳದ ಅಣ್ಣಪ್ಪ ಮಲ್ಲಪ್ಪ ಮುಗಳಖೋಡ, ಗದಗ ಎಂ.ಡಿ.ಶಿರಹಟ್ಟಿ, ಬೆಂಗಳೂರಿನ ಡಾ.ಜಿ.ಕೆ.ವಿಶ್ವನಾಥ್, ದಬ್ಬಣ್ಣ, ರಾಮಯ್ಯ, ಮಂಗಳೂರಿನ ಬಿ.ಪ್ರಭಾಕರ, ದಾಂಡೇಲಿಯ ಎಂ.ಎಚ್.ನಾಯಕ, ರಾಮನಗರದ ಪಂಚಲಿಂಗಯ್ಯ, ಸಂಗಮ ವನ್ಯಜೀವಿ ವಲಯದ ದೊಡ್ಡಶೆಟ್ಟಿ, ಕಾವೇರಿ ವನ್ಯಜೀವಿ ವಲಯದ ಮಹದೇವ, ಹಲಗ, ರಾಮನಗರ ವಿಭಾಗದ ಚಿಕ್ಕೀರಯ್ಯ, ಹಾಸನದ ಎನ್.ಆಲ್.ಅಣ್ಣೇಗೌಡ, ಸಾಗರ ಪ್ರಾದೇಶಿಕ ವಿಭಾಗದ ಕ್ಷೇಮಾಭಿವೃದ್ಧಿ ನೌಕರ ಎಂ.ಎಚ್.ನಾಗರಾಜ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ವೀಕ್ಷಕ ಎಂ.ಮಹೇಶ್ ಹಾಗೂ ದಿನಗೂಲಿ ನೌಕರ ಶಿವಕುಮಾರ್ ಅವರನ್ನು ನೆನಯಲಾಯಿತು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಡಿಸಿಎಫ್‌ ಅಲೆಕ್ಸಾಂಡರ್, ಪೂವಯ್ಯ, ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.