ADVERTISEMENT

ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣ ಕೊಡುಗೆ

ಕೋವಿಡ್ ಉಲ್ಬಣಿಸದಂತೆ ತಡೆಯಲು ಆಮ್ಲಜನಕ ಬೆಡ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 11:48 IST
Last Updated 8 ಜೂನ್ 2021, 11:48 IST
ಮಂತ್ರ ಫಾರ್ ಜೇಂಜ್ ಮತ್ತು ಸೂರ್ಯ ಫೌಂಡೇಷನ್ ವತಿಯಿಂದ ಜಿಲ್ಲೆಯ ಎರಡು ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲಾಗುತ್ತಿರುವ ವೈದ್ಯಕೀಯ ಪರಿಕರಗಳನ್ನು ಮಂಗಳವಾರ ಜಲದರ್ಶಿನಿ ಅತಿಥಿ ಗೃಹದಲ್ಲಿ ಪ್ರದರ್ಶಿಸಲಾಯಿತು
ಮಂತ್ರ ಫಾರ್ ಜೇಂಜ್ ಮತ್ತು ಸೂರ್ಯ ಫೌಂಡೇಷನ್ ವತಿಯಿಂದ ಜಿಲ್ಲೆಯ ಎರಡು ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲಾಗುತ್ತಿರುವ ವೈದ್ಯಕೀಯ ಪರಿಕರಗಳನ್ನು ಮಂಗಳವಾರ ಜಲದರ್ಶಿನಿ ಅತಿಥಿ ಗೃಹದಲ್ಲಿ ಪ್ರದರ್ಶಿಸಲಾಯಿತು   

ಮೈಸೂರು: ಗ್ರಾಮಾಂತರ ಪ್ರದೇಶಗಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕೋವಿಡ್ ಉಲ್ಬಣಿಸದಂತೆ ತಡೆಯಲು ಸರ್ಕಾರೇತರ ಸಂಸ್ಥೆಗಳು ಮುಂದಾಗಿವೆ.

ಮಂತ್ರ ಫಾರ್ ಜೇಂಜ್ ಮತ್ತು ಸೂರ್ಯ ಫೌಂಡೇಷನ್ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದಾಗಿದ್ದು, ಜಿಲ್ಲೆಯ ಎರಡು ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಬೆಡ್‌ ವ್ಯವಸ್ಥೆ ಕಲ್ಪಿಸಲು ಅಗತ್ಯ ವೈದ್ಯಕೀಯ ಪರಿಕರಗಳನ್ನು ವಿತರಿಸುತ್ತಿವೆ ಎಂದು ಸುಜೀವ್ ಸಂಸ್ಥೆಯ ಮುಖ್ಯಸ್ಥ ರಾಜಾರಾಂ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ನಂದಿನಾಥಪುರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 5 ಮಂಚ, ಹಾಸಿಗೆ, 10 ಲೀಟರ್ ಸಾಮರ್ಥ್ಯದ 5 ಆಮ್ಲಜನಕ ಕಾನ್ಸನ್‌ಟ್ರೇಟರ್ಸ್, 10 ಲೀಟರ್ ಸಾಮರ್ಥ್ಯದ 5 ಆಮ್ಲಜನಕ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಇವುಗಳ ಒಟ್ಟು ₹ 15 ಲಕ್ಷಕ್ಕೂ ಹೆಚ್ಚಿದೆ ಎಂದು ಅವರು ತಿಳಿಸಿದರು.

ADVERTISEMENT

ಇನ್ಫೋಸಿಸ್‌ನ ಶಿಬುಲಾಲ್ ಅವರ ಸಹಕಾರ ಈ ಕಾರ್ಯಕ್ಕೆ ಇದೆ ಎಂದರು.ಮಂತ್ರ ಫೌಂಡೇಷನ್‌ನ ಪುನೀತ್, ಸೂರ್ಯ ಫೌಂಡೇಶನ್‌ನ ಶರವಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.