ADVERTISEMENT

ಬಿಜೆಪಿಯ ವಿಜಯೇಂದ್ರರಿಂದ ಔಷಧಿ, ಸಾಮಗ್ರಿಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 13:17 IST
Last Updated 12 ಏಪ್ರಿಲ್ 2020, 13:17 IST
ಬಿಜೆಪಿ ಯುವ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ
ಬಿಜೆಪಿ ಯುವ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ   

ಟಿ.ನರಸೀಪುರ: ಲಾಕ್‌‌ಡೌನ್‌‌ನಿಂದಾಗಿ ನಿತ್ಯದ ಆಹಾರದ ಜತೆಔಷಧಗಳಿಗಾಗಿ ಪರದಾಡುವ ಪರಿಸ್ಥಿತಿಯಜನರಿಗೆಹಾಗೂ ಅಶಕ್ತರಿಗೆ ಅಗತ್ಯವಿರುವಷ್ಟು ಔಷಧಗಳನ್ನು ಮನೆ, ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಕಾರ್ಯವನ್ನುರಾಜ್ಯಾದ್ಯಂತ ಸಮರೋಪಾದಿಯಲ್ಲಿ ರಾಜ್ಯ ಬಿಜೆಪಿಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಭರವಸೆಯ ಯುವ ನೇತಾರ ವಿಜಯೇಂದ್ರಕೈಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಸಹ ವಕ್ತಾರ ಆರ್.ರಘು (ಕೌಟಿಲ್ಯ) ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಅವರೊಂದಿಗೆ ಹೆಗಲು ಕೊಟ್ಟಿರುವ ಬಿಜೆಪಿ ಯುವ ಮೋರ್ಚ ಕಾರ್ಯಕರ್ತರು ಹಾಗೂವಿಜಯೇಂದ್ರ ಅಭಿಮಾನಿ ಬಳಗವನ್ನು ಅಭಿನಂದಿಸುವುದಾಗಿ ಅವರು ಹೇಳಿದರು.

ಟಿ.ನರಸೀಪುರ ತಾಲ್ಲೂಕಿನ ಹೆಳವರ ಹುಂಡಿ ಗ್ರಾಮದಲ್ಲಿ ವಿಜಯೇಂದ್ರ ಅಭಿಮಾನಿ ಬಳಗ ಮತ್ತು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಅವಶ್ಯವಿರುವವರಿಗೆ ಔಷಧಿಗಳನ್ನು ಮತ್ತು ಕೆಲವು ಗೃಹೋಪಯೋಗಿ ವಸ್ತುಗಳನ್ನು ವಿತರಿಸಿದ ಸಂದರ್ಭದಲ್ಲಿ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

ADVERTISEMENT

ಅನಿರೀಕ್ಷಿತವಾಗಿ ಎರಗಿ ಬಂದಿರುವ ಕೊರೊನಾ ವೈರಾಣುವಿನ ಮಹಾ ಅವಾಂತರ ಜಗತ್ತನ್ನೇ ತಲ್ಲಣಗೊಳಿಸಿ ಮನುಕುಲದ ಅಸ್ತಿತ್ವಕ್ಕೇ ಸವಾಲು ಒಡ್ಡಿ ಜನಜೀವನ ಸ್ತಬ್ದಗೊಳ್ಳುವಂತೆ ಮಾಡಿದೆ. ಕರ್ನಾಟಕದಲ್ಲಿ ಈ ಮಹಾಮಾರಿ ಅಟ್ಟಹಾಸ ಮೆರೆಯದಂತೆ ಅದನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಮುಖ್ಯಮಂತ್ರಿಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರಶಂಸನೀಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳತ್ತಿದೆ. ಅನಿವಾರ್ಯ‘ಲಾಕ್ ಡೌನ್’ ಮುಂದುವರಿದಿದೆ. ಇಂಥಾ ಸಂದರ್ಭದಲ್ಲಿ ಕಡುಬಡವರ, ನಿರ್ಗತಿಕ ಜನರ,ಹಾಗೂ ಹಲವು ವ್ಯಾದಿಗಳಿಂದ ಬಳಲುತ್ತಿರುವವರಿಗೆ ನಿತ್ಯ ಜೀವನಕ್ಕೆ ತೊಂದರೆಯಾಗದಂತೆ ಆಹಾರದ ಜತೆಗೇ ಔಷದಿಯೂ ಅನಿವಾರ್ಯವಾಗಿದ್ದು ಇದನ್ನು ಪೂರೈಸುವ ಸೇವಾ ಕಾರ್ಯವನ್ನು ಎಷ್ಟೇ ಆರ್ಥಿಕ ಹೊರೆಯಾದರೂ ಅದನ್ನು ಲೆಕ್ಕಿಸಿದೇ ಪೂರೈಸುವ ಕಾರ್ಯವನ್ನು ವಿಜಯೇಂದ್ರ ಕೈಗೊಂಡಿದ್ದಾರೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಸಮಯೋಚಿತ ನಿರ್ಧಾರ ಕೈಗೊಂಡು ಕೊರೊನಾ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಕೈಗೊಳ್ಳದಿದ್ದರೆ ಇಂದು ದೇಶ ಬಹು ವಿಪತ್ತು ಪರಿಸ್ಥಿತಿ ಎದುರಿಸಬೇಕಾಗುತ್ತಿತ್ತು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಯಡಿಯೂರಪ್ಪನವರು ಕೈಗೊಂಡ ಕ್ರಮಗಳು ದೇಶದಲ್ಲೇ ಮೆಚ್ಚುಗೆಗೆ ಪಾತ್ರವಾಗಿದೆ. ಬಿಜೆಪಿ ಕಾರ್ಯಕರ್ತರೂ ಸಹ ಸಂಘಟಿತವಾಗಿ ಇಂಥಾ ಕಠಿಣ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಕ್ಕೆ ಮಿಡಿಯುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪುತ್ರರೆಂಬ ಯಾವ ಹಮ್ಮ-ಬಿಮ್ಮು ಇಲ್ಲದೆ ಸಾಮಾನ್ಯ ಕಾರ್ಯಕರ್ತರಂತೆ ವಿಜಯೇಂದ್ರ ಪಕ್ಷದ ಅಣತಿಯಂತೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಸಾವಿರಾರು ಯುವ ಕಾರ್ಯಕರ್ತರಿಗೆ ಪ್ರೇರಣೆಯಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ವಿಜಯೇಂದ್ರ ಅಭಿಮಾನಿ ಬಳಗದ ಯೋಗೀಶ್, ಮಹೇಶ್ ಮಂಜುಕುಮಾರ್,ದೀಪು,ನಂದೀಶ್,ಕಿಚ್ಚಕುಮಾರ್, ನಂದ,ವಿಜಯ್,ಅಭಿ ಮೊದಲಾದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.