ಎಚ್.ಡಿ.ಕೋಟೆ: ತಾಲ್ಲೂಕಿನ ತಾರಕ ಜಲಾಶಯ ವ್ಯಾಪ್ತಿಯ 20 ಸಾವಿರ ಎಕರೆ ಜಮೀನುಗಳಿಗೆ ಉಪಯೋಗವಾಗಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲ್ಲೂಕಿನ ಸೋಗಹಳ್ಳಿ ಗ್ರಾಮದ ತಾರಕ ಏತ ನೀರಾವರಿ ಘಟಕದಲ್ಲಿ ಶನಿವಾರ ಕಬಿನಿ ಜಲಾಶಯದ ಹಿನ್ನೀರಿನಿಂದ ತಾರಕ ಜಲಾಶಯಕ್ಕೆ ಏತ ನೀರಾವರಿಗೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನ ರೈತರ ಜೀವನದಿಯಾಗಿರುವ ತಾರಕ ಜಲಾಶಯದಲ್ಲಿ ಮೂರು ಟಿಎಂಸಿ ನೀರು ಶೇಖರಣೆಯಾಗಲಿದೆ.
ಎರಡು ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ತಾರಕ ಜಲಾಶಯವನ್ನು ಭರ್ತಿ ಮಾಡಲಾಗುವುದು 120 ದಿನಗಳ ಕಾಲ 2 ಯಂತ್ರಗಳ ಮೂಲಕ ನೀರೆತ್ತುವ ಕಾರ್ಯ ನಡೆಯಲಿದೆ ಎಂದರು.
ನಾಲೆಗಳ ಅಭಿವೃದ್ಧಿ ಮತ್ತು ಪೈಪ್ಲೈನ್ ಕಾಮಗಾರಿ ನಡೆಸಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬಳಿ ಮನವಿ ಸಲ್ಲಿಸಿದ್ದು ಅವರು ಶೀಘ್ರವೇ ಅನುದಾನ ನೀಡಲಿದ್ದಾರೆ. ಬಲದಂಡೆ ವ್ಯಾಪ್ತಿಯ 12 ಕಿಲೋಮೀಟರ್ ವ್ಯಾಪ್ತಿಯಲ್ಲಿ ಲೈನಿಂಗ್ ಕಾಮಗಾರಿ ನಡೆಸದೆ ಗುತ್ತಿಗೆದಾರ ನಾಪತ್ತೆಯವಾಗಿದ್ದಾನೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಹೊಸದಾಗಿ ಟೆಂಡರ್ ಕರೆಯಲಾಗುವುದು ಎಂದರು.
ತಾಲ್ಲೂಕಿನಲ್ಲಿ ಕಬಿನಿ, ನಗು, ತಾರಕ ಜಲಾಶಗಳಿದ್ದರೂ ತಾಲ್ಲೂಕಿನ ರೈತರಿಗೆ ತಾರಕ ಜಲಾಶಯದಿಂದ ಹೆಚ್ಚಿನ ಅನುಕೂಲವಾಗುತ್ತಿದೆ ಎಂದರು.
ತಾಲ್ಲೂಕಿನ ಮೂರು ಜಲಾಶಯಗಳ ಅಭಿವೃದ್ಧಿಗಾಗಿ ಈಗಾಗಲೇ ನೀಲಿ ನಕ್ಷೆ ತಯಾರಿಸಿ ಸರ್ಕಾರಕ್ಕೆ ನೀಡಲಾಗಿದೆ ಎಂದರು.
ಕಬಿನಿ ಇಇ ಚಂದ್ರಶೇಖರ್, ಎಇಇ ರಾಮೇಗೌಡ, ಉಷಾ, ಜೆಇ ನಟಶೇಖರ್ಮೂರ್ತಿ, ಮಂಜುನಾಥ್, ಗೌಶಿಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಗುರುಸ್ವಾಮಿ, ಮುಖಂಡರಾದ ಕ್ಯಾತನಹಳ್ಳಿ ನಾಗರಾಜು, ಶಂಭುಲಿಂಗ ನಾಯಕ, ಚಿಕ್ಕವೀರ ನಾಯಕ, ದೊಡ್ಡ ನಾಯಕ, ನರಸಿಂಹೇಗೌಡ, ಹಿರೇಹಳ್ಳಿ ಸೋಮೇಶ್, ಸತೀಶ್ ಗೌಡ, ನರಸೀಪುರ ರವಿ, ನಾಗನಹಳ್ಳಿ ಪ್ರದೀಪ, ರಾಜು ವಿಶ್ವಕರ್ಮ, ಗಣೇಶ ಚಾರಿ, ಭಾಸ್ಕರ್, ರಾಜಣ್ಣ, ಮಹದೇವು, ಬಾಲಯ್ಯ, ಮಲ್ಲೇಶ್, ಸೋಮು, ಪರಶಿವ, ಶಿವಪ್ಪ ಕೋಟೆ, ಕೆಂಡಗಣ್ಣೇಗೌಡಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.