ADVERTISEMENT

ಪ್ರತಿಭಟನೆ ವಾಪಸ್ ಪಡೆದ ಶಾಸಕ ಸಾ.ರಾ.ಮಹೇಶ್

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 20:28 IST
Last Updated 30 ಏಪ್ರಿಲ್ 2022, 20:28 IST

ಮೈಸೂರು : ತನ್ನ ವಿರುದ್ಧ ಪ್ರಕರಣ ದಾಖಲಾದ ಸಂಬಂಧ ಇಲ್ಲಿನ ಲಕ್ಷ್ಮಿಪುರಂ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಶಾಸಕ ಸಾ.ರಾ.ಮಹೇಶ್ ತಮ್ಮ ಧರಣಿಯನ್ನು ಶನಿವಾರ ತಡರಾತ್ರಿ ವಾಪಸ್ ಪಡೆದರು.
ಸ್ಥಳಕ್ಕೆ ಬಂದ ಕಮಿಷನರ್ ಡಾ.ಚಂದ್ರಗುಪ್ತ ಅವರ ಮನವೊಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, 'ನನ್ನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ಗೊತ್ತಾಯಿತು. ಬಂಧಿಸಲಿ ಎಂದು ಠಾಣೆಗೆ ಬಂದೆ. ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ ಎಂದರು. ಹಿಂದೆ ಮಚ್ಚು ಹಿಡಿದು ಬೆದರಿಸುವ ರೌಡಿಗಳು ಇದ್ದರು.
ಇಂದು ಪೆನ್ನು ಹಿಡಿದು ಬೆದರಿಸುವ ರೌಡಿಗಳಿದ್ದಾರೆ‌. ಆ ಆರ್‌ಟಿ‌ಐ ಕಾರ್ಯಕರ್ತನ ಹಿನ್ನೆಲೆ ಏನು? ಅವರ ಆದಾಯದ ಮೂಲ ಏನು? ಕಳೆದ ಎರಡು ತಿಂಗಳಿಂದ ನಡೆದಿರುವ ಮೊಬೈಲ್ ಫೋನ್ ಸಂಭಾಷಣೆ ಕುರಿತ ವಿವರ ತೆಗೆಸಿದರೆ ಬಂಡವಾಳ ಬಯಲಾಗುತ್ತದೆ ಎಂದು ಹೇಳಿದರು.

ನಾನು ಈಜುಕೊಳ, ಬಟ್ಟೆ ಬ್ಯಾಗ್ ಹಗರಣ ಕುರಿತಂತೆ ಹೋರಾಟ ಮಾಡಿದರೂ ನ್ಯಾಯ ಸಿಕ್ಕಿಲ್ಲ.
ನನ್ನ ವಿರುದ್ದ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಅವರ ಜೊತೆ ಈ ಮಾಹಿತಿ ಹಕ್ಕು ಕಾರ್ಯಕರ್ತರೂ ಸೇರಿಕೊಂಡಿರಬಹುದು. ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಈ ರೀತಿ ದೂರು ನೀಡುವುದು ಇಲ್ಲಿಗೆ ಕೊನೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.