ADVERTISEMENT

ಮೈಸೂರು | ದಸರಾ ಹಿನ್ನೆಲೆ ವಿಶೇಷ ರೈಲು ಸೇವೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2023, 13:20 IST
Last Updated 19 ಅಕ್ಟೋಬರ್ 2023, 13:20 IST
   

ಮೈಸೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ನೈರುತ್ಯ ರೈಲ್ವೆಯು ಮೈಸೂರು–ಧಾರವಾಡ ಹಾಗೂ ಮೈಸೂರು–ವಿಜಯಪುರ ನಡುವೆ ವಿಶೇಷ ರೈಲು ಸೇವೆಗೆ ವ್ಯವಸ್ಥೆ ಮಾಡಿದೆ.

ರೈಲು ಸಂಖ್ಯೆ 06205 ಮೈಸೂರಿನಿಂದ ಧಾರವಾಡಕ್ಕೆ ಅ.22ಮತ್ತು 24ರಂದು ಎರಡು ಸಲ ಸಂಚರಿಸಲಿದೆ. ಮೈಸೂರಿನಿಂದ ರಾತ್ರಿ 10.35ಕ್ಕೆ ಹೊರಡುತ್ತದೆ ಮತ್ತು ಮರು ದಿನ ಬೆಳಿಗ್ಗೆ 8ಕ್ಕೆ ಧಾರವಾಡ ತಲುಪುತ್ತದೆ. ಕೃಷ್ಣರಾಜ ನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ ಮತ್ತು ಹುಬ್ಬಳ್ಳಿಯಲ್ಲಿ ನಿಲುಗಡೆ ಇದೆ.

ರೈಲು ಸಂಖ್ಯೆ 06206 ಧಾರವಾಡದಿಂದ ಮೈಸೂರಿಗೆ ಅ.23 ಮತ್ತು 25ರಂದು ಪ್ರಯಾಣಿಸಲಿದೆ. ಧಾರವಾಡದಿಂದ ಬೆಳಿಗ್ಗೆ 11.15ಕ್ಕೆ ಹೊರಟು ರಾತ್ರಿ 9.30ಕ್ಕೆ ಮೈಸೂರು ತಲುಪುತ್ತದೆ. ಹುಬ್ಬಳ್ಳಿ, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜ ನಗರದಲ್ಲಿ ನಿಲುಗಡೆ ಇರುತ್ತದೆ.

ADVERTISEMENT

ಈ ರೈಲುಗಳು ಒಂದು 2ನೇ ದರ್ಜೆ ಎಸಿ, ಮೂರು 3ನೇ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‌ಗಳ ಸಂಯೋಜನೆ ಹೊಂದಿವೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಲೋಹಿತೇಶ್ವರ ಜೆ. ತಿಳಿಸಿದ್ದಾರೆ.

ರೈಲು ಸಂಖ್ಯೆ 06203 ಅ.20ರಂದು ಮೈಸೂರಿನಿಂದ ವಿಜಯಪುರಕ್ಕೆ ಒಂದು ಬಾರಿಯ ಪ್ರಯಾಣಿಸಲಿದೆ. ಅದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದ ಮೂಲಕ ಸಂಚರಿಸಲಿದೆ. ಮೈಸೂರಿನಿಂದ ಸಂಜೆ 5.30ಕ್ಕೆ ಹೊರಟು ಮರು ದಿನ ಬೆಳಿಗ್ಗೆ 10ಕ್ಕೆ ವಿಜಯಪುರ ತಲುಪಲಿದೆ. ಮಂಡ್ಯ, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಕರಜಗಿ, ಹುಬ್ಬಳ್ಳಿ, ಹೊಳೆ ಆಲೂರು, ಬಾದಾಮಿ ಮತ್ತು ಬಾಗಲಕೋಟೆಯಲ್ಲಿ ನಿಲುಗಡೆ ಇರುತ್ತದೆ.

ರೈಲು ಸಂಖ್ಯೆ 06204 ವಿಜಯಪುರದಿಂದ ಮೈಸೂರಿಗೆ ಹಾಸನ ಮಾರ್ಗವಾಗಿ ಅ.21ರಂದು ಪ್ರಯಾಣಿಸಲಿದೆ. ವಿಜಯಪುರದಿಂದ ಬೆಳಿಗ್ಗೆ 11.45ಕ್ಕೆ ಹೊರಟು ಮರುದಿನ ಮುಂಜಾನೆ 3ಕ್ಕೆ ಮೈಸೂರು ತಲುಪುತ್ತದೆ. ಮಾರ್ಗದಲ್ಲಿ ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಹುಬ್ಬಳ್ಳಿ, ಕಾರಜಗಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜ ನಗರದಲ್ಲಿ ನಿಲುಗಡೆ ಇರುತ್ತದೆ.

ಈ ರೈಲುಗಳು ಒಂದು 2ನೇ ದರ್ಜೆ ಎಸಿ, ಮೂರು 3ನೇ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‌ಗಳ ಸಂಯೋಜನೆ ಹೊಂದಿದೆ.

ಮೈಸೂರಿನಿಂದ ಚಾಮರಾಜ ನಗರ ಮತ್ತು ಮೈಸೂರಿನಿಂದ ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸುವ ದಸರಾ ವಿಶೇಷ ರೈಲುಗಳ ಸಮಯ ಪರಿಷ್ಕರಿಸಲಾಗಿದೆ.

ರೈಲು ಸಂಖ್ಯೆ 06597 ಕೆಎಸ್‌ಆರ್ ಬೆಂಗಳೂರಿನಿಂದ ಸಂಜೆ 5ಕ್ಕೆ ಹೊರಟು ರಾತ್ರಿ 8.15ಕ್ಕೆ ಮೈಸೂರು ತಲುಪಲಿದೆ ಮತ್ತು ಪ್ರತಿಯಾಗಿ ರೈಲು ನಂ.06598 ಮೈಸೂರಿನಿಂದ ರಾತ್ರಿ 8.30ಕ್ಕೆ ಹೊರಟು ರಾತ್ರಿ 11.30ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ಈ ವಿಶೇಷ ರೈಲುಗಳು ಹೆಚ್ಚುವರಿ ಜನದಟ್ಟಣೆ ಕಾರಣದಿಂದ ಅ.20ರಿಂದ ಅ.24ರವರೆಗೆ ಸೇವೆ ನೀಡಲಿವೆ.

ರೈಲು ನಂ.06283 ಮೈಸೂರಿನಿಂದ ಚಾಮರಾಜ ನಗರಕ್ಕೆ ಅ.24ರಂದು ರಾತ್ರಿ 8.45ಕ್ಕೆ ಮೈಸೂರಿನಿಂದ ಹೊರಟು ರಾತ್ರಿ 10.40ಕ್ಕೆ ಚಾಮರಾಜ ನಗರ ತಲುಪಲಿದೆ. ಅಲ್ಲಿಂದ ರಾತ್ರಿ 11ಕ್ಕೆ ಹೊರಟು ಮಧ್ಯರಾತ್ರಿ 1ಕ್ಕೆ ಮೈಸೂರಿಗೆ ತಲುಪುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.