ಮೈಸೂರು: 2024-25ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ₹3.90 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಹರೀಶ್ ಗೌಡ ಭೂಮಿಪೂಜೆ ನೆರವೇರಿಸಿದರು.
ವಾರ್ಡ್ ನಂ.21ರಲ್ಲಿ ₹1.98 ಕೋಟಿ ವೆಚ್ಚದಲ್ಲಿ ಜನತಾನಗರ 8ನೇ ಕ್ರಾಸ್, ಗಂಗೋತ್ರಿ 5, 10, ಮತ್ತು 12ನೇ ಕ್ರಾಸ್, ವಾಗ್ಗೇವಿ ನಗರ ವ್ಯಾಪ್ತಿ ಹಾಗೂ ಮಾರುತಿ ದೇವಸ್ಥಾನದಿಂದ ಗಂಗೋತ್ರಿ ಗಣಪತಿ ದೇವಸ್ಥಾನ, ದೇವಸ್ಥಾನ ಜಂಕ್ಷನ್‌ನಿಂದ ಕಾಮಾಕ್ಷಿ ಆಸ್ಪತ್ರೆ ರಸ್ತೆವರೆಗೆ ಒಳಚರಂಡಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
₹1.27 ಕೋಟಿ ವೆಚ್ಚದಲ್ಲಿ ವಾರ್ಡ್ ನಂ.6ರ ಕೆಆರ್‌ಎಸ್ ಮುಖ್ಯ ರಸ್ತೆಯಿಂದ ಆದಿತ್ಯ ಆಸ್ಪತ್ರೆವರೆಗೆ ಹಾಗೂ ವಾರ್ಡ್ ನಂ.40ರ ನಜರಾಬಾದ್‌ನ ಹೈದರಗುಂಟೆ ಉದ್ಯಾನದಿಂದ ಅರಸು ಬೋರ್ಡಿಂಗ್ ಶಾಲೆಯವರೆಗೆ ₹65 ಲಕ್ಷ ವೆಚ್ಚದಲ್ಲಿ ಒಳಚರಂಡಿ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ಒಳಗೊಂಡಿದೆ ಎಂದರು.
ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ವಾರ್ಡ್ ಅಧ್ಯಕ್ಷ ವಿಶ್ವ, ದಿನೇಶ್, ಮಾಜಿ ಮೇಯರ್‌ಗಳಾದ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ನಗರ ಪಾಲಿಕೆ ಮಾಜಿ ಸದಸ್ಯ ಜೆ.ಗೋಪಿ, ಮುಖಂಡರಾದ ಟಿ.ಬಿ.ಚಿಕ್ಕಣ್ಣ, ಭಾಸ್ಕರ್ ಎಲ್.ಗೌಡ, ಶ್ರೀನಿವಾಸ್, ರಾಜಣ್ಣ, ಸಂತೋಷ್, ರಾಮಕೃಷ್ಣ, ಲಾಯರ್ ಶ್ರೀನಿವಾಸ್, ಟೆಂಟ್ ಶ್ರೀನಿವಾಸ್, ಸುಶೀಲ ಮರೀಗೌಡ, ಗಾಯತ್ರಿ ನಾರಾಯಣಗೌಡ, ತೇಜಸ್, ಲೋಕೇಶ್, ರಾಮಣ್ಣ, ಮರಿಲಿಂಗಣ್ಣ, ಚಿಕ್ಕರಂಗನಾಯಕ, ನರಸೇಗೌಡ, ಗಿರೀಶ್, ದಿನೇಶ್, ಶಿವು ಕಾರ್ತಿಕ್ ಕಿಶೋರ್, ನಿತಿನ್ ಮಹಾನಗರ ಪಾಲಿಕೆ ಅಧಿಕಾರಿಗಳಾದ ಶುಶ್ರುತ್, ಮುಸ್ತಫಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.