ADVERTISEMENT

ಮೈಸೂರು ಲಾಕ್‌ಡೌನ್ | ಹಸಿವಿನಿಂದ ಬಳಲುತ್ತಿದ್ದವರಿಗೆ ಪೊಲೀಸರಿಂದ ಆಹಾರ ಪೂರೈಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 5:49 IST
Last Updated 26 ಮಾರ್ಚ್ 2020, 5:49 IST
   

ಮೈಸೂರು: ಲಾಕ್‌ಡೌನ್‌ನಿಂದನಗರದಲ್ಲಿ 250ಕ್ಕೂ ಅಧಿಕ ಮಂದಿ ಸಂಕಷ್ಟದಲ್ಲಿ ಸಿಲುಕಿದ್ದಾರೆ‌.ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಹೋಟೆಲ್‌ನಲ್ಲಿ ಊಟ ಮಾಡಿ ರಸ್ತೆಬದಿಯಲ್ಲಿ, ಅಂಗಡಿಗಳ ಮುಂದೆ ಮಲಗುತ್ತಿದ್ದವರು ಇದೀಗ ಹೋಟೆಲ್‌ಗಳು ಬಂದ್ ಆಗಿರುವುದರಿಂದ ಹಸಿವಿನಿಂದ ಬಳಲುತ್ತಿದ್ದಾರೆ.

ಇವರಿಗೆ ಪೊಲೀಸರು, ವಿವಿಧ ಸಂಘ, ಸಂಸ್ಥೆಗಳು ಆಹಾರ ಪೊಟ್ಟಣಗಳನ್ನು ವಿತರಿಸುವ ಕೆಲಸ ಮಾಡುತ್ತಿವೆ. ಗುರುವಾರ ಬೆಳಿಗ್ಗೆ ಇವರಿಗೆಲ್ಲ ಡಿಸಿಪಿ ಪ್ರಕಾಶಗೌಡ ಆಹಾರ ಪೊಟ್ಟಣ ವಿತರಿಸಿದರು. ಕೆಲವರಿಗೆ ಇವು ಸಾಕಾಗಲಿಲ್ಲ. ಸಂಘ, ಸಂಸ್ಥೆಯ ಪ್ರತಿನಿಧಿಗಳು ಬರಬಹುದು ಎಂದು ಆಹಾರ ಸಿಗದ ಇನ್ನಷ್ಟು ಮಂದಿ ಕಾದು ಕುಳಿತಿದ್ದರು.

ಇವರಿಗೆಲ್ಲ ಸೂರು ಮತ್ತು ಆಹಾರ ಒದಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ADVERTISEMENT

ಮಾರುಕಟ್ಟೆಗೆ ಅವಕಾಶ: ಮೈಸೂರಿನಲ್ಲಿ ಎಂದಿನಂತೆ ಗುರುವಾರವೂ ಮಾರುಕಟ್ಟೆಗಳಿಗೆ ಪ್ರವೇಶ ನೀಡಲಾಯಿತು. ಎಂ.ಜಿ.ರಸ್ತೆ ಮಾರುಕಟ್ಟೆಯ ಸಮಯ ಕಡಿತ ಮಾಡಿದ್ದರಿಂದ ಜನಸಂದಣಿ ಅಧಿಕವಾಗುತ್ತದೆ ಎಂದು ಸದ್ಯ ಸಮಯದ ಮಿತಿಯನ್ನು ತೆಗೆದುಹಾಕಲಾಗಿದೆ. ಆದರೆ ಪ್ರವೇಶಕ್ಕೆ ಜನರ ಸಂಖ್ಯೆಯ ಮೇಲೆ ಮಿತಿ ಹೇರಲಾಗಿದೆ.

ದಿನಸಿ ಅಂಗಡಿಗಳು ಹಾಗೂ ಔಷಧ ಅಂಗಡಿಗಳ ಮುಂದೆ ಜನರು ಅಕ್ಕಪಕ್ಕ ನಿಲ್ಲದಂತೆ ಸಾಕಷ್ಟು ಅಂತರದಲ್ಲಿ ಚೌಕಾಕೃತಿ ಬಿಡಿಸಿದ್ದು, ಅದರಲ್ಲಿ ನಿಂತೆ‌ ವಸ್ತುಗಳ ಖರೀದಿ ಮಾಡಬೇಕು ಎಂದು ಸೂಚಿಸಲಾಗುತ್ತಿದೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.