ADVERTISEMENT

ಮೈಸೂರು ದಸರಾ: ಗಮನಸೆಳೆದ ಯೋಗ ನೃತ್ಯ ರೂಪಕ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 16:23 IST
Last Updated 26 ಸೆಪ್ಟೆಂಬರ್ 2022, 16:23 IST
   

ಮೈಸೂರು: ವಿವಿಧ ಆಟೋಟಗಳಿಗೆ ಅಂಕಣವಾಗುತ್ತಿದ್ದ ನಗರದ ಓವಲ್ ಮೈದಾನ ಸೋಮವಾರ ಯೋಗ ನೃತ್ಯ ರೂಪಕಗಳಿಗೆ ವೇದಿಕೆಯಾಯಿತು. ಯೋಗಾಭ್ಯಾಸದ ಮಹತ್ವವನ್ನು ಆ ಕಾರ್ಯಕ್ರಮ ಸಾರಿತು.

ಯೋಗ ದಸರಾ ಉಪ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವು ತಂಡದವರು ಯೋಗದ ಆಸನಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿ ಗಮನಸೆಳೆದರು. ಇದರೊಂದಿಗೆ ನಗರದ ವಿವಿಧೆಡೆ ನಡೆಯುವ ಯೋಗ ದಸರೆಗೆ ಚಾಲನೆ ದೊರೆಯಿತು.

ಯೋಗ ಗುರು ಯೋಗಿ ದೇವರಾಜ್ ಅವರಿಗೆ ‘ಯೋಗ ಸಿರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ADVERTISEMENT

ಬಳಿಕ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ‘ಯೋಗ ದಿನದಂದು ಮೈಸೂರಿಗೆ‌ ಬಂದು‌ ಮೋದಿ ಯೋಗ ಮಾಡಿದ್ದರಿಂದ ಮೈಸೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗುರುತಿಸಿಕೊಳ್ಳುವಂತಾಗಿದೆ. ಗೋಕುಲ‌ಂ ಬಡಾವಣೆಯಲ್ಲಿ ‌ಹೊರ ದೇಶದವರು ಬಂದು ಯೋಗ ಕಲಿಯುತ್ತಿದ್ದಾರೆ. ಆದರೆ, ನಾವು ಮಾಡದಿರುವುದು ವಿಷಾದನೀಯ’ ಎಂದರು.

‘ದೈಹಿಕ‌ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ನಿತ್ಯವೂ ಯೋಗಾಭ್ಯಾಸ ಮಾಡಬೇಕು’ ಎಂದು ಸಲಹೆ ನೀಡಿದರು.

ಡಾ.ಗಣೇಶ್ ಕುಮಾರ್ ಶಂಖನಾದ ಮೊಳಗಿಸಿದರು. ಗಿರಿಜಾ ಮಲ್ಲೇಶ್ ಮತ್ತು ತಂಡದವರು ಪ್ರಾರ್ಥಿಸಿದರು.

ಉಪಸಮಿತಿಯ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷರಾದ ಯೋಗೇಶ್‌ಕುಮಾರ್ ಜೆ.ಸಿ., ಈಶ್ವರ್ ಸಿ., ಸದಸ್ಯ ಅರುಣ್ ಕುಮಾರ್, ಡಿಡಿಎಲ್‌ಆರ್‌ ಸೀಮಂತಿನಿ‌, ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಶ್ರೀಹರಿ, ಶಶಿಕುಮಾರ್, ಚಂದ್ರಶೇಖರ್ ಇದ್ದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.