
ಮೈಸೂರು: ಇಲ್ಲಿನ ಮೈಸೂರು ವಕೀಲರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ನಿರ್ದೇಶಕರನ್ನು ವಕೀಲರ ಸಂಘದಿಂದ ಶುಕ್ರವಾರ ಸನ್ಮಾನಿಸಲಾಯಿತು.
2026- 31ನೇ ಸಾಲಿನ ಆಡಳಿತ ಮಂಡಳಿಗೆ ಈಚೆಗೆ ಚುನಾವಣೆ ನಡೆದಿತ್ತು.
ಸಾಮಾನ್ಯ ವರ್ಗದಿಂದ ಎಲ್.ಎಲಿಜಾ, ಜೆ.ಲೋಕೇಶ್ ಗೌಡ, ಶಂಭುಗೌಡ, ಜಿ.ಡಿ.ಸುಮಂತ್, ಪಿ.ಎಲ್. ಪಂಚಲಿಂಗೇಗೌಡ, ಪ್ರಸನ್ನಕುಮಾರ್ ಕೆ.(ಗಂಜಾಂ), ರಾಜು ಪಿ., ಎನ್.ಮಂಜುನಾಥ್, ಹಾಲಿ ಅಧ್ಯಕ್ಷ ಪಿ.ತೇಜಸ್ವಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ‘ಎ’ಯಿಂದ ಸಿದ್ದಪ್ಪಾಜಿಚಾರಿ, ಪ್ರವರ್ಗ ‘ಬಿ’ಯಿಂದ ಗೋಪಾಲೇಗೌಡ ಎಸ್.ಆರ್., ಪರಿಶಿಷ್ಟ ಜಾತಿಯಿಂದ ಪ್ರಸಾದ್‌ಕುಮಾರ್ ಎಸ್., ಪರಿಶಿಷ್ಟ ಪಂಗಡದಿಂದ ಸೋಮನಾಯಕ ಬಿ. ಹಾಗೂ ಮಹಿಳಾ ಮೀಸಲು ವರ್ಗದಿಂದ ಬಿ.ಆರ್. ಅನುರಾಧಾ ಮತ್ತು ಮಂಗಳಾ ಸಿ. ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಅವರನ್ನು ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಕಾರ್ಯದರ್ಶಿ ಎ.ಜಿ.ಸುಧೀರ್ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು, ಹಿರಿಯ ವಕೀಲರು ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.