
ಪ್ರಜಾವಾಣಿ ವಾರ್ತೆಪ್ರಾತಿನಿಧಿಕ ಚಿತ್ರ
ಮೈಸೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿ ಎರಡು ತಾಸು ಉತ್ತಮ ಮಳೆಯಾಯಿತು. ಮೈಸೂರು ನಗರದಲ್ಲಿ ಮಧ್ಯರಾತ್ರಿ ಜೋರು ವರ್ಷಧಾರೆಯಾಯಿತು.
ಬೇಸಿಗೆಯ ಆರಂಭದಲ್ಲೇ ಮಧ್ಯರಾತ್ರಿ ಅಕಾಲಿಕ ಮಳೆಯಿಂದ ಜನರು ಪುಳಕಗೊಂಡರು. ರಸ್ತೆಗಳು ಮಳೆನೀರಿನಿಂದ ತುಂಬಿದವು. ಶಿವರಾತ್ರಿ ನಂತರದಲ್ಲಿ ಸೆಖೆ ಹೆಚ್ಚಾಗಿದ್ದು, ವರುಣ ಸಿಂಚನವು ಬೇಗೆ ನೀಗಿಸಿತು.
ಗ್ರಾಮೀಣ ಭಾಗದಲ್ಲಿಯೂ ಉತ್ತಮ ಮಳೆ ಬಿದ್ದಿದ್ದು, ಹೊಲಗಳಲ್ಲಿ ನೀರು ನಿಂತಿತ್ತು. ಮಾವಿನ ಮರಗಳಲ್ಲಿ ಕಾಯಿಗಳು ಬಲಿಯುವ ಹಂತದಲ್ಲಿದ್ದು, ಮಾವು ಕೃಷಿಗೆ ಮಳೆ ವರದಾನವಾಗಿದೆ.
ಮಂಡ್ಯ ಜಿಲ್ಲೆಯ ವಿವಿಧೆಡೆ, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊಣನೂರು ಭಾಗದಲ್ಲಿ ಜೋರು ಗಾಳಿ ಸಹಿತ ತುಂತುರು ಮಳೆಯಾಯಿತು. ಕೊಡಗು ಜಿಲ್ಲೆಯ ಸುಂಟಿಕೊಪ್ಪ ತುಂತುರು ಮಳೆ ಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.