ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿಯಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಎಂ.ಎಸ್. ಅನಿತಾ ಮಂಗಲ ಅವರು ಕೃತಿಗಳನ್ನು ಬಿಡುಗಡೆ ಮಾಡಿದರು.
ಎಸ್. ಸುಂದರ್ ಕುಮಾರ್ ಅವರ ‘ಜನರೊಡಲ ಜಂಗಮ’, ವಸು ವತ್ಸಲೆ ಅವರ ‘ಮನಸೇ ಥ್ಯಾಂಕ್ಯೂ’ ಹಾಗೂ ಆರ್. ಸದಾಶಿವಯ್ಯ ಚರಗನಹಳ್ಳಿ ಅವರ ‘ಕಾವ್ಯಧಾರೆ’ ಮತ್ತು ದಿವಾಕರ ಆಜಾದ್ ಅವರ ‘ವಿಕರ್ಣ’ ಕೃತಿಗಳು ಬಿಡುಗಡೆಯಾದವು.
ಕಾರ್ಯಕ್ರಮದಲ್ಲಿ ಎಸ್. ಸುಂದರ ಕುಮಾರ್, ವಸು ವತ್ಸಲೆ, ಆರ್. ಸದಾಶಿವಯ್ಯ ಹಾಗೂ ದಿವಾಕರ ಆಜಾದ್ ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅಧ್ಯಕ್ಷತೆ ವಹಿಸಿದ್ದರು. ಉಪಸಮಿತಿ ಸದಸ್ಯ ರಾಜಶೇಖರ ಕದಂಬ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.