ADVERTISEMENT

ಮೈಸೂರು: ದಸರಾ ವಸ್ತುಪ್ರದರ್ಶನ 16 ದಿನ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 12:41 IST
Last Updated 19 ಡಿಸೆಂಬರ್ 2025, 12:41 IST
   

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದಿಂದ ಇಲ್ಲಿ ಆಯೋಜಿಸಿರುವ ‘ದಸರಾ ವಸ್ತುಪ್ರದರ್ಶನ’ವನ್ನು ಜ.5ರವರೆಗೆ ಮುಂದುವರಿಸಲಾಗಿದೆ.

ಸೆ.22ರಂದು ಪ್ರಾರಂಭವಾದ ವಸ್ತುಪ್ರದರ್ಶನವನ್ನು ಶನಿವಾರ (ಡಿ.20)ದವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಸಾರ್ವಜನಿಕರು ಹಾಗೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದಾಗಿ ಮತ್ತು ಹೊಸ ವರ್ಷದ ಅಂಗವಾಗಿ ಹಿಂದಿನ ವರ್ಷಗಳಂತೆಯೇ ಮತ್ತಷ್ಟು ದಿನಗಳವರೆಗೆ ಮುಂದುವರಿಸಲಾಗಿದೆ.

‘ಗುತ್ತಿಗೆದಾರರ ಕೋರಿಕೆ ಮೇರೆಗೆ ವಸ್ತುಪ್ರದರ್ಶನವನ್ನು ಜ.5ರವರೆಗೆ ಅಂದರೆ ಒಟ್ಟು 16 ದಿನಗಳ ಕಾಲ ಮುಂದುವರಿಸಿ ಪ್ರವಾಸಿಗರು, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಸಿಇಒ ರುದ್ರೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.